ಒಬ್ಬರಿಗೆ ಒಂದೇ ಹುದ್ದೆ: ತತ್ವದಡಿ ಧಾರವಾಡ ಶಹರದಲ್ಲಿ ಅವಿರೋಧ ಆಯ್ಕೆ
1 min readಧಾರವಾಡ: ರಾಜ್ಯ ಶಿಕ್ಷಕರ ಸಂಘದ ಚುನಾವಣೆಯ ಅಂಗವಾಗಿ ಶಹರ ವಿಭಾಗದಲ್ಲಿ ಒಟ್ಟು 8ಸ್ಥಾನಗಳಿಗೆ 32 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಮೂವರು ಬಿಆರ್ ಪಿಗಳ ನಾಮಪತ್ರಗಳನ್ನು ತಿರಸ್ಕರಿಸಿ ಒಟ್ಟು 29ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು.
ಒಬ್ಬರಿಗೆ ಒಂದೇ ಹುದ್ದೆ ತತ್ವದಡಿ ಸೊಸೈಟಿ ಮತ್ತು ನೌಕರರ ಸಂಘದಲ್ಲಿ ಹುದ್ದೆ ಹೊಂದಿದವರು ರಾಜೀನಾಮೆಯನ್ನು ಲಿಖಿತವಾಗಿ ಸಂತೋಷದಿಂದ ನೀಡಿದ ಕಾರಣ ಅವಿರೋಧ ಆಯ್ಕೆಯಾಗಿದ್ದು ಎಲ್ಲ ಬಣಗಳು ಒಮ್ಮತದಿಂದ ಇದನ್ನು ಒಪ್ಪಿ ಬಸವರಾಜ ಗುರಿಕಾರ, ಎಂ.ಸಿ.ಸವಣೂರ, ಎಸ್.ಬಿ. ಕೇಸರಿ, ವಿ.ಜಿ. ಕಂಬಿ, ಪಿ.ಎಫ್. ಗುಡೇನಕಟ್ಟಿ, ಲತಾ ಮುಳ್ಳೂರ ಹಾಗೂ ಎಲ್ಲ ಬಣಗಳವರು ಸೇರಿಕೊಂಡು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಧಾರವಾಡ ಶಹರದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಮಾದರಿ ತತ್ವದಡಿ ಎಲ್ಲ ಶಿಕ್ಷಕರ ಸಹಮತದಡಿ ಆಯ್ಕೆಯಾಗಿದ್ದು ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಮತ್ತು ಗೌರವಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಆರ್.ಬಿ. ಲಿಂಗದಾಳ ಮತ್ತು ಸೊಸೈಟಿ ನಿರ್ದೇಶಕ ಹುದ್ದೆಗೆ ಎಂ.ಆರ್. ಕಬ್ಬೇರ್ ರಾಜೀನಾಮೆ ನೀಡಿದ್ದು ಒಟ್ಟು 8 ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆಯಿತು.