1ರಿಂದ 5 ತರಗತಿ ತಜ್ಞರ ಸಲಹೆಯಿಲ್ಲದೇ ಶಾಲೆ, ಬಿಸಿಯೂಟ ಆರಂಭಿಸಬಹುದೇ.. . ಸಮೀಕ್ಷೆಗೆ ನಿಂತ ಶಿಕ್ಷಕರ ಸಂಘ..!
1 min readಹುಬ್ಬಳ್ಳಿ: ಇಂದಿನಿಂದ 9ನೇ ತರಗತಿ ಆರಂಭವಾಗುತ್ತಿರುವ ಬೆನ್ನಲ್ಲೇ 1ನೇ ತರಗತಿಯಿಂದ 5 ನೇ ತರಗತಿಯವರೆಗೆ ಶಾಲೆಗಳನ್ನ ಆರಂಭಿಸಬೇಕಾ ಅಥವಾ ಬೇಡವಾ ಎನ್ನೋ ಜಿಜ್ಞಾಸೆಯನ್ನ ಕಡಿಮೆ ಮಾಡಲು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಮೀಕ್ಷೆಯೊಂದನ್ನ ನಡೆಸುತ್ತಿದೆ.
link
https://docs.google.com/forms/d/1FuTKt6ZYjVBHB6sDBtrTdgpTT2Deeu2R8mfIj98V4NE/edit
ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ. ನಿಮ್ಮ ಅಭಿಪ್ರಾಯವನ್ನ ತಿಳಿಸುವ ಮೂಲಕ ಮುಂದಿನ ಭವಿಷ್ಯವನ್ನ ಏನು ಮಾಡಬೇಕೆಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.
1ರಿಂದ 5 ನೇ ತರಗತಿಯ ಶಾಲೆಗಳನ್ನ ಆರಂಭಿಸಬೇಕಾ. ತಜ್ಞರ ಸಲಹೆ ಇಲ್ಲದೇ ಶಾಲೆ ಮತ್ತು ಬಿಸಿಯೂಟವನ್ನ ಆರಂಭಿಸುವುದು ಸರಿಯಾ ಎಂಬ ಪ್ರಶ್ನೆಗೆ ಉತ್ತರ ನೀಡಬೇಕೆಂಬುದು ಸಂಘದ ಮನವಿಯಾಗಿದೆ.
ಮಕ್ಕಳ ಬಗ್ಗೆ ಕಾಳಜಿ, ಸರಕಾರಿ ಶಾಲೆಗಳ ಬಗ್ಗೆ ನಿಮಗೆ ಪ್ರೇಮವಿದ್ದರೇ ಈ ಸಮೀಕ್ಷೆಯಲ್ಲಿ ಭಾಗವಹಿಸಿ.