Posts Slider

Karnataka Voice

Latest Kannada News

ಶಿಕ್ಷಕರ ರಾಜ್ಯಾಧ್ಯಕ್ಷರಾದರೂ ಹೀಗೆ ಇರಬೇಕಲ್ಲವೇ…! ಸರಕಾರದ ಕೆಲಸ ದೇವರ ಕೆಲಸ..!

1 min read
Spread the love

ಮೊದಲು ಶಾಲೆ ನಂತರ ಸಂಘಟನೆ

ಮೊದಲು ಮಕ್ಕಳ ಸೇವೆ ನಂತರ ಸಮಾಜ ಸೇವೆ. ನಾವು ಸೇವೆ ಮಾಡುವುದಾದರೆ, ಶಾಲಾ ಅವಧಿ ನಂತರ ಶಾಲಾ ಅವಧಿ ಮೊದಲು ಮಾಡಬೇಕು. ದೂರವಾಣಿ ಕರೆ ಮಾಡಿದರೆ ಪಾಠ ಮಾಡುತ್ತಿದ್ದೇನೆ. ಊಟದ ಸಮಯದಲ್ಲಿ ಮಾತನಾಡೋಣ ಎನ್ನುತ್ತಾರೆ. ಇಂತಹ ಆದರ್ಶ ಶಿಕ್ಷಕ ಪದಾಧಿಕಾರಿಗಳೂ ಇದ್ದಾರೆ. ಇದೀಗ ಚುನಾಯಿತರಾದ ಸುಮಾರು 3500 ಜನ ಶಿಕ್ಷಕರು ಇದನ್ನರಿತು ನಡೆಯಬೇಕಾಗಿದೆ. ಇಲ್ಲದಿದ್ದರೆ, ಶಾಲೆಯಿಂದ ಹೊರಗುಳಿದ ಮಕ್ಕಳ ಬದಲಾಗಿ ಶಾಲೆಯಿಂದ ಹೊರಗುಳಿದ ಶಿಕ್ಷಕರು ಇವರಾಗುತ್ತಾರೆ. ಸರ್ಕಾರ ಮತ್ತು ಇಲಾಖೆಯೂ ಇವರಿಗೆ ಆಗಾಗ ಎಚ್ಚೆರಿಸುವುದೊಳಿತು.

ಧಾರವಾಡ: ನಾವೂ ಏನೇ ಮಾಡಿದರೂ ಮೊದಲು ನಮ್ಮ ವೃತ್ತಿಯನ್ನ ಮರೆಯಬಾರದು. ತಾವೂ ಏನು ಎನ್ನುವುದು ಅರ್ಥ ಮಾಡಿಕೊಂಡರೇ ಮಾತ್ರ ಹೀಗೆ ಇರಲು ಸಾಧ್ಯ. ಹಾಗಾಗಿಯೇ, ಶಿಕ್ಷಕ ವಲಯದಲ್ಲಿ ರಾಜ್ಯಾಧ್ಯಕ್ಷರಿದ್ದರೂ ಕೂಡಾ ಮೊದಲು, ‘ಸರಕಾರದ ಕೆಲಸ ದೇವರ ಕೆಲಸ’ ಎನ್ನುತ್ತಿದ್ದಾರೆ.

ಹೌದು.. ನಾವೂ ಹೇಳಲು ಹೊರಟಿರುವುದು ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನರ ಬಗ್ಗೆ. ಶಾಲೆಯಲ್ಲಿ ವಿದ್ಯಾಗಮ-2  ಆರಂಭವಾದಾಗಿನಿಂದ ತಾವೇ ಮುಂದೆ ನಿಂತು ಮೊದಲು ಕೊರೋನಾ ಟೆಸ್ಟ್ ಮಾಡಿಸಿಕೊಂಡರು. ಎಲ್ಲಿಯೂ ತಾವೊಬ್ಬ ರಾಜ್ಯಾಧ್ಯಕ್ಷರೆನ್ನುವ ಅಹಂ ಇಲ್ಲದೇ ನಡೆದುಕೊಂಡಿದ್ದಾರೆ.

ತಾವೂ ವೇತನ ಪಡೆಯುವ ಶಾಲೆಯಲ್ಲಿ ದಿನವೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನ ನೀಡುತ್ತಿದ್ದಾರೆ. ನೆಲದಡಿ ಕೂತು ವಿದ್ಯಾಗಮ-2 ಯೋಜನೆಯನ್ನ ಜಾರಿಗೊಳಿಸುತ್ತಿದ್ದಾರೆ. ಮಕ್ಕಳೊಂದಿಗೆ ಬೆರೆಯುವುದು ಎಂದರೇ, ಇದೇ ಅಲ್ಲವೇ..

ಶಿಕ್ಷಕರ ಮೊದಲು ತಾವೂ ಗುರು. ಇದೇ ಕಾರಣದಿಂದ ತಾವೂ ಹೇಗೆ ಇರಬೇಕೆಂದು ನಿರ್ಧರಿಸಿ ಹೊರಟಿರುವುದು ಅಶೋಕ ಸಜ್ಜನ ಅವರ ಗುಣವಾಗಿದೆ. ಇವರ ರೀತಿ ಸಾವಿರಾರೂ ಶಿಕ್ಷಕರಿಗೆ ಮಾದರಿಯಾದರೇ, ಇನ್ನೂ ಉತ್ತಮವಾಗಿರತ್ತೆ ಅಲ್ಲವೇ.. ವಿಶೇಷವಾಗಿ ಸಂಘದಲ್ಲಿರೋರರಿಗೆ..


Spread the love

Leave a Reply

Your email address will not be published. Required fields are marked *