ಶಿಕ್ಷಕರ ವರ್ಗಾವಣೆ ಶೇ.ಮಿತಿ ಹೆಚ್ಚಿಸಲು CM ಹಾಗೂ ಶಿಕ್ಷಣ ಸಚಿವರಿಗೆ ಹಕ್ಕೊತ್ತಾಯ ಮಾಡಿದ ಗ್ರಾಮೀಣ ಶಿಕ್ಷಕರ ಸಂಘ
1 min readಹುಬ್ಬಳ್ಳಿ: ಕಳೆದ ಐದು ವರ್ಷದಿಂದ ವರ್ಗಾವಣೆ ನಡೆಯದೇ ಇರುವುದರಿಂದ ವರ್ಗಾವಣೆಯ ಮೀತಿಯನ್ನ ಹೆಚ್ಚಿಸಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಒತ್ತಾಯಿಸಿದೆ.
ಮಾನ್ಯರೆ,
ವಿಷಯ: ಕಳೆದ 5 ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆಯದಿರುವುದರಿಂದ ಈ ಸಾಲಿನ ವರ್ಗಾವಣೆ ಮಿತಿ ಹೆಚ್ಚಿಸಲು ಮನವಿ
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ,ರಾಜ್ಯ ಘಟಕ ಹುಬ್ಬಳ್ಳಿಯ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ
ಶಿಕ್ಷಕ ಸ್ನೇಹಿ ವರ್ಗಾವಣೆ ಪರಿಕಲ್ಪನೆ ಪರಿಚಯಿಸುವ ಮೂಲಕ ಶಿಕ್ಷಕರ ಬಹುದಿನಗಳ ಬೇಡಿಕೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತಿರುವ ತಮಗೆ ನಮ್ಮ ಸಂಘವು ಸಮಸ್ತ ಗ್ರಾಮೀಣ ಶಿಕ್ಷಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ
ಕಳೆದ 3 ವರ್ಷಗಳಿಂದ ವಿವಿಧ ತಾಂತ್ರಿಕ ಸಮಸ್ಯೆ ಉಂಟಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿರುವುದಿಲ್ಲ. ಆದ್ದರಿಂದ ಈ ವರ್ಷದ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಿತಿಯನ್ನು ಘಟಕದ ಒಳಗೆ 10% ಹಾಗೂ ಘಟಕದ ಹೊರಗೆ 6% ಹೆಚ್ಚಿಸಿ ವರ್ಗಾವಣೆಯಿಂದ ವಂಚಿತರಾದ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ತಮ್ಮಲ್ಲಿ ನಮ್ಮ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ .ಮಹಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ .ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ ಹನುಮಂತಪ್ಪ ಮೇಟಿ. ಡಿ.ಎಸ್.ಭಜಂತ್ರಿ.ಕುಕನೂರ.ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ .ಡಿ ಟಿ ಬಂಡಿವಡ್ಡರ ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ. ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವಮ್ಮ ಕಲ್ಪನಾ ಚಂದನಕರ. ರವಿ ಬಂಗೆನ್ನವರ ಶಿವರಡ್ಡಿ .ಅಶೋಕ.ಬಿಸೆರೊಟ್ಟಿ ನಾಗರಾಜ್ ಕೆ . ರೇಖಾ ದೇವಿ ದೇವಿಕಾ ಕಮ್ಮಾರ ಮುಂತಾದ ಪದಾಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗೌರವಾನ್ವಿತ ವಂದನೆಗಳೊಂದಿಗೆ