KSPST ಹಣ ಕಟಾವಣೆ ಮಾಡಬೇಡಿ: ಬಿಈಓರಿಗೆ ಮನವಿ ಸಲ್ಲಿಸಿದ ಗ್ರಾಮೀಣ ಸಂಘ..

ಧಾರವಾಡ: KSPSTಯ 2021/22ರ ಹಣವನ್ನ ಕಟಾವಣೆ ಮಾಡಬಾರದೆಂದು ಗ್ರಾಮೀಣ ಶಿಕ್ಷಕರ ಸಂಘವೂ ಧಾರವಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಅವರಿಗೆ ಮನವಿಯನ್ನ ಸಲ್ಲಿಸಿದರು.

ಧಾರವಾಡ ಜಿಲ್ಲಾ ಗಾಮೀಣ ಶಿಕ್ಷಕರ ಸಂಘದಿಂದ ಸಂಘದಿಂದ ಬಿ.ಇ.ಓ.ರಿಗೆ ಮನವಿ
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅದ್ಯಕ್ಷರು ಅಕ್ಬರಅಲಿ ಇ ಸೋಲಾಪುರ ಇವರ ನೇತೃತ್ವದಲ್ಲಿ ಧಾರವಾಡ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಅವರಿಗೆ ಬೇಟಿಯಾಗಿ,ಕೊವಿಡ್ 19 ರ ಪರಿಣಾಮವಾಗಿ ಇಲ್ಲಿವರೆಗೆ ಲಾಕ್ಡೌನ್ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಟಿತವಾಗಿತ್ತು ಮತ್ತು ಕಾಯಾ೯ಲಯದ ಕಡೆ ಮುಖ ಮಾಡದೇ ಬಹು ದಿನಗಳಾದ್ದರಿಂದ ಇಂದು ಸ್ವತ ಭೇಟಿಯಾಗಿ ನಮ್ಮ ಶಿಕ್ಷಕರ ಬಗ್ಗೆ ಅತೀವ ಕಾಳಜೀ ಹೊಂದಿರುವ ಅಧಿಕಾರಿ ಬಿಇಓರವರು ನಮ್ಮೆಲ್ಲರ ಯೋಗಕ್ಷೇಮ ಮತ್ತು ಕುಶಲೋಪರಿ ವಿಚಾರಿಸಿದರು.

ಸಂಘದ ಚಟುವಟಿಕೆಯ ಪಾಲುದಾರರಾದ ನಾವು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ( KSPSTA) 2021-22 ನೆಯ ಸಾಲಿನ ವಾರ್ಷಿಕ ಸದಸ್ಯತ್ವವನ್ನು ಶಿಕ್ಷಕರ ವೇತನದಲ್ಲಿ ಕಟಾವಣೆ ಮಾಡುವ ಮುಂಚೆ ತಾಲೂಕಿನ ಎಲ್ಲಾ ಶಿಕ್ಷಕರಿಗೆ ಸುತ್ತೋಲೆಯ ಮೂಲಕ ಮಾಹಿತಿಯನ್ನು ನೀಡಬೇಕು ಎಂದು ಮನವಿಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಮುಂದುವರೆದು, ಆ ಸಂಘಕ್ಕೆ ಯಾರು ಸದಸ್ಯತ್ವವನ್ನು ಬಯಸಿ ಅರ್ಜಿ ಕೊಡುತ್ತಾರೆ ಅಂತಹ ಶಿಕ್ಷಕರ ಸದಸ್ಯತ್ವವನ್ನು ಮಾತ್ರವೇ ಕಟಾವಣೆ ಮಾಡಬೇಕು, ಯಾರು ತಟಸ್ಥ ಉಳಿಯುತ್ತಾರೆ ಅಂತಹ ಶಿಕ್ಷಕರ ಸದಸ್ಯತ್ವದ ಹಣವನ್ನು ಕಟಾವಣೆ ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ಬಿಇಓ ಅವರಿಗೆ ಮನವಿಯನ್ನು ಮಾಡಲಾಯಿತು, ರಾಜ್ಯ ಗೌರವಾದ್ಯಕ್ಷ ಎಲ್ ಐ ಲಕ್ಕಮ್ಮನವರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜೀವಸಿಂಗ ಹಲವಾಯಿ ಜಿಲ್ಲಾ ಕೋಶಾದ್ಯಕ್ಷ ಕೆ ಎಂ ಮುನವಳ್ಳಿ, ಧಾರವಾಡ ತಾಲ್ಲೂಕು ಅದ್ಯಕ್ಷ ಎಸ್ ಎಸ್ ಧನಿಗೊಂಡ ಮುಂತಾದವರಿದ್ದರು.