ಗ್ರಾಮೀಣ ಶಿಕ್ಷಕರ ಗೋಳು ಕೇಳುವವರು ಯಾರು….!?
1 min readಹುಬ್ಬಳ್ಳಿ: ಬೇಸಿಗೆ ರಜೆಯ ಕಾಲ ಬಂದರೂ, ಸಾರಿಗೆ ಸಂಸ್ಥೆಗಳ ಬಸ್ ಬಂದಾದರೂ ಗ್ರಾಮೀಣ ಶಿಕ್ಷಕರ ಗೋಳು ಕಡಿಮೆಯಾಗುತ್ತಿಲ್ಲ. ಪ್ರತಿ ದಿನವೂ ಸರಕಾರದ ಕಡೆ ಮುಖ ಮಾಡುತ್ತ, ತಮ್ಮ ಶಾಲೆಗಳಿಗೆ ತೆರಳಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.
ಹುಬ್ಬಳ್ಳಿ ತಾಲೂಕಿನ ಕೋಳಿವಾಡ, ಮಲ್ಲಿಗವಾಡ ಗ್ರಾಮದ ಸರಕಾರಿ ಶಾಲೆಗಳಿಗೆ ತೆರಳಲು ಶಿಕ್ಷಕಿಯರು ಪ್ರತಿದಿನವೂ ಪರದಾಟ ನಡೆಸುವಂತಾಗಿದೆ. ಶಿಕ್ಷಕಿಯರು ಸಿಕ್ಕ ಸಿಕ್ಕ ವಾಹನಗಳ ಮೂಲಕ ತೆರಳುವಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಹೊಲಗಳಿಗೆ ಹೋಗುವ ಟ್ರ್ಯಾಕ್ಟರುಗಳು, ಗೂಡ್ಸ್ ವಾಹನಗಳೀಗ ಶಿಕ್ಷಕ ಸಮೂಹಕ್ಕೆ ಆಸರೆಯಾಗಿವೆ. ಒಂದೇಡೆ ಕೊರೋನಾದಿಂದ ಮಕ್ಕಳು ಶಾಲೆಗೆ ಬರದಂತಾಗಿದ್ದು, ಪ್ರತಿದಿನವೂ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೂ, ಶಿಕ್ಷಕ ಸಮೂಹಕ್ಕೆ ಯಾವುದೇ ನಿರ್ಧಾರಗಳನ್ನ ಸರಕಾರ ತೆಗೆದುಕೊಳ್ಳುತ್ತಿಲ್ಲ.
ಗ್ರಾಮೀಣ ಶಿಕ್ಷಕರ ಸ್ಥಿತಿಯ ಬಗ್ಗೆ ರಾಜ್ಯ ಸರಕಾರಿ ಶಿಕ್ಷಕರ ಸಂಘ ಸರಕಾರದ ಗಮನಕ್ಕೆ ತರಬೇಕಿದೆ. ಇಲ್ಲದಿದ್ದರೇ, ಶಿಕ್ಷಕ ಸಮೂಹ ಮತ್ತೆ ಅನಾರೋಗ್ಯದಲ್ಲಿ ಬೀಳುವುದು ನಿಶ್ಚಿತ.