ಧಾರವಾಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ: ದೈಹಿಕ ಶಿಕ್ಷಣ ಶಿಕ್ಷಕರಿಗಿಲ್ಲ ಗೌರವ- ಎತ್ತ ಸಾಗುತ್ತಿದೆ ಶಿಕ್ಷಣ ಇಲಾಖೆ…!
1 min readಧಾರವಾಡ: ದೈಹಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಮನೋಧೈರ್ಯ ಹೆಚ್ಚಾಗುವುದಲ್ಲದೇ, ದೈಹಿಕ ದೃಢತೆ ಹೆಚ್ಚುತ್ತದೆ ಎಂಬುದನ್ನ ಸಚಿವರು ಕೂಡಾ ಪದೇ ಪದೇ ಹೇಳುತ್ತಾರೆ. ಆದರೆ, ಪ್ರಶಸ್ತಿಗಳಿಂದ ಮಾತ್ರ ದೈಹಿಕ ಶಿಕ್ಷಣ ನೀಡುವ ಶಿಕ್ಷಕರಿಗೆ ಅವಕಾಶವೇ ಇರೋದಿಲ್ಲ.
ಧಾರವಾಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯಲ್ಲಿ (ಪ್ರೌಢ , ಪ್ರಾಥಮಿಕ) ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಹೊಸ ಶಿಕ್ಷಣ ನೀತಿ 2020 ರಲ್ಲಿ ದೈಹಿಕ ಶಿಕ್ಷಣ ಕಡ್ಡಾಯ ಎಂಬುದನ್ನ ಒಪ್ಪಿಕೊಳ್ಳಲಾಗಿದೆ.
ಈಗ ಆಯ್ಕೆ ಮಾಡಿರುವ ಶಿಕ್ಷಕರಲ್ಲೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಧ್ಯತೆಯನ್ನ ನೀಡದೇ ಇರುವುದು ಸೋಜಿಗದ ಸಂಗತಿಯಾಗಿದೆ. ರಾಜ್ಯ ಪ್ರಶಸ್ತಿಯಲ್ಲೂ ಇದೇ ಮುಂದುವರೆದಿದ್ದು, ದೈಹಿಕ ಶಿಕ್ಷಣ ನೀಡುವ ಶಿಕ್ಷಕರು ಎಚ್ಚೆತ್ತುಕೊಳ್ಳಬೇಕಿದೆ.
ಪ್ರಶಸ್ತಿಗಳು ಬರುವುದರಿಂದ ಕೆಲಸ ಮಾಡುವ ಉಮೇದಿ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಅದನ್ನ ಶಿಕ್ಷಣ ಇಲಾಖೆ ಯಾವ ಒತ್ತಡಕ್ಕೆ ಮಣಿದು ಕಡೆಗಣಿಸುತ್ತೋ.. ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.