ಶಿಕ್ಷಕರ ವರ್ಗಾವಣೆ- ನಾಳೆ ಮಹತ್ವದ ಸಭೆಗೆ ಮುಂದಾದ ಶಿಕ್ಷಣ ಇಲಾಖೆ…!
1 min readಬೆಂಗಳೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಸಂಬಂಧ ಮಹತ್ವವಾದ ಸಭೆಯನ್ನ ನಾಳೆಗೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ನಾಳೆಯಾದರೂ ಶಿಕ್ಷಕರಿಗೆ ಸಿಹಿ ಸುದ್ದಿ ಸಿಗಲಿದೇಯಾ ಎಂದು ಕಾಯಬೇಕಾಗಿದೆ.
ಸರಕಾರ ಹಲವು ವಿಷಯಗಳ ಬಗ್ಗೆ ಸುಗ್ರಿವಾಜ್ಞೆ ಹೊರಡಿಸಿದ ನಂತರವೂ ವರ್ಗಾವಣೆ ಪ್ರಕ್ರಿಯೆಯನ್ನ ಆರಂಭಿಸಿದೇ ಇರುವುದು ಶಿಕ್ಷಕ ಸಮೂಹದಲ್ಲಿ ಸಾಕಷ್ಟು ಬೇಸರ ಮೂಡಿಸಿದ್ದು, ಹಲವರು ಈಗಾಗಲೇ ಸಿಎಂಗೂ ಸೇರಿದಂತೆ ಇಲಾಖೆಯ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
2021ನೇ ಸಾಲಿನ ವರ್ಗಾವಣೆ ಬಗ್ಗೆ ಚರ್ಚೆ ನಡೆಸಲು ನಿರ್ದೇಶಕರು ಸೂಚನಾ ಪತ್ರವನ್ನ ಹೊರಿಡಿದ್ದು, ಸಭೆಯಲ್ಲಿ ಇಲಾಖೆಯ ಮಹತ್ವದ ನಿರ್ಣಯವನ್ನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಶಿಕ್ಷಕರ ವರ್ಗಾವಣೆ ಹಲವು ವರ್ಷಗಳಿಂದ ನಡೆಯದೇ ಇರುವುದು ಶಿಕ್ಷಕ ವಲಯದಲ್ಲಿ ಸರಕಾರದ ನಡೆಯನ್ನ ಖಂಡಿಸುವಂತಾಗಿದ್ದು, ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಸಮಯದಲ್ಲಾದರೂ, ವರ್ಗಾವಣೆ ಆರಂಭವಾಗತ್ತಾ ಎಂಬ ಪ್ರಶ್ನೆಗೆ ನಾಳೆಗೆ ಉತ್ತರ ಸಿಗುವ ನೀರಿಕ್ಷೆಯಿದೆ.