ಜನಜಾಗೃತಿಯಲ್ಲಿ ಶಿಕ್ಷಕರು ಭಾಗಿ… ಜನರಲ್ಲಿ ಅರಿವು ಮೂಡಿಸಿದ “ಗುರುಗಳು”…!
1 min readರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದಲ್ಲಿ ಮಾರಲದಿನ್ನಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಕೋವಿಡ್ ಲಸಿಕೆಯ ಮಹತ್ವದ ಕುರಿತು ಜಾಗೃತಿ ಕಾರ್ಯ ನಡೆಯಿತು.
ಸಮುದಾಯದ ಆರೋಗ್ಯ ಅಧಿಕಾರಿ ಬಸವರಾಜ ಅವರು, ಸಾಂಕ್ರಾಮಿಕ ರೋಗಗಳಾದ ಚಿಕೂನಗೂನ್ಯಾ, ಕ್ಷಯ, ಡೇಂಘಿ, ಮಲೇರಿಯಾ ರೋಗಗಳ ತಡೆಯ ಬಗ್ಗೆ ವಿವರಿಸಿದರು.
60 ವರ್ಷ ಮೇಲ್ಪಟ್ಟವರು ಹಾಗೂ 45 ರಿಂದ 60 ವರ್ಷದ ಒಳಗಿನ ಸಕ್ಕರೆ ಕಾಯಿಲೆ, ರಕ್ತದೊತ್ತಡ ದಿಂದ ಬಳಲುವವರು ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಶಾಲೆಯ ಮುಖ್ಯಶಿಕ್ಷಕ ವರದೇಂದ್ರ ಮಾತನಾಡಿ, ಯಾವುದೇ ಕಾರಣಕ್ಕೂ ಯಾರು ಭಯಪಡಬೇಡಿ. ಆದಷ್ಪು ಬೇಗ ಹತ್ತಿರದ ಆಸ್ಪತ್ರೆಗೆ ಹೋಗಿ ಹೆಸರು ನೋಂದಾಯಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು.
ಶಿಕ್ಷಕ ಪರಮಾನಂದ ಮಾತನಾಡಿ, ಕೋರೊನಾದಿಂದ ಆರ್ಥಿಕವಾಗಿ ಶೈಕ್ಷಣಿಕವಾಗಿ ನಮಗೆಲ್ಲಾ ಹಿನ್ನಡೆಯಾಗಿದೆ ಆದಷ್ಟು ಬೇಗ ಇದರಿಂದ ನಾವು ಹೊರಬರಬೇಕಾಗಿದೆ. ಎಲ್ಲರೂ ಮಾಸ್ಕ್ ಬಳಸಿ ಅಂತರ ಕಾಪಾಡಿ ಎಂದರು. ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.