ಶಿಕ್ಷಕರ ವರ್ಗಾವಣೆಗಾಗಿ ಸರಕಾರಕ್ಕೆ ಸೂಚಿಸಲು ಸಭಾಪತಿ ಹೊರಟ್ಟಿಯವರಿಗೆ ಪತ್ರ…!
1 min readಧಾರವಾಡ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸರಕಾರ ಮತ್ತು ಶಿಕ್ಷಣ ಇಲಾಖೆಗೆ ಸೂಚನೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪತ್ರವೊಂದನ್ನ ಬರೆದು ಮನವಿ ಮಾಡಿಕೊಂಡಿದೆ.
ಮನವಿ ಪತ್ರದ ಪ್ರತಿ
ಗೆ
ಮಾನ್ಯ ಶ್ರೀ ಬಸವರಾಜ ಹೊರಟ್ಟಿ
ಸನ್ಮಾನ್ಯ ಸಭಾಪತಿಗಳು
ವಿಧಾನ ಪರಿಷತ್
ಕರ್ನಾಟಕ ಸರ್ಕಾರ
ಬೆಂಗಳೂರ
ಮಾನ್ಯರೇ
ವಿಷಯ: ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ಆದೇಶದಂತೆ ಶಿಕ್ಷಕರ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಮನವಿ
ನಮ್ಮ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಹುಬ್ಬಳ್ಳಿಯ ಎಲ್ಲ ಹಂತದ ಪದಾಧಿಕಾರಿಗಳು ಹಾಗೂ ನಾಡಿನ ಸಮಸ್ತ ವರ್ಗಾವಣೆ ಅಪೇಕ್ಷಿತರು ಈ ಮೂಲಕ ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುವುದೇನೆಂದರೆ…
ಈ ಮೇಲಿನ ವಿಷಯದನ್ವಯ ಇಲ್ಲಿಯವರೆಗೆ ಐದು ವರ್ಷಗಳಲ್ಲಿ ಒಂದು ಬಾರಿ ಮಾತ್ರ ವರ್ಗಾಣೆಯಾಗಿದೆ. ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆ ಗೆ ಕಳೆದ ನವೆಂಬರ್ ನಲ್ಲಿ ಅರ್ಜಿ ಕರೆದು ಎಪ್ಪತ್ತು ಸಾವಿರ ಅರ್ಜಿಗಳನ್ನ ಸ್ವೀಕರಿಸಲಾಗಿದ್ದು ಈಗಾಗಲೇ ಎರಡು ತಿಂಗಳಾಗಿವೆ .
2020 ರ ಶಿಕ್ಷಕರ ವರ್ಗಾವಣೆ ಅಧಿನಿಯಮದಲ್ಲಿ ಇರಲಾರದ ಕಡ್ಡಾಯ ವರ್ಗಾವಣೆ ಆದವರಿಗೆ ಮೊದಲ ಅವಕಾಶ ನೀಡಬೇಕು ಎಂಬ ಇಲಾಖೆಯ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ ತಡೆ ನೀಡಿದ್ದು 2020 ರ ಕಾಯಿದೆಯ ಅನ್ವಯ ಮಾಡಲು ಆದೇಶ ನೀಡಿದೆ ಆ ಕಾಯಿದೆಯ ಅನುಸಾರವೆ ಸುಮಾರು 72000 ಶಿಕ್ಷಕರು ವರ್ಗಾವಣೆ ಗೆ ಅರ್ಜಿ ಸಲ್ಲಿಸಿದ್ದಾರೆ ..ಆದರೆ ಇಲಾಖೆಯು 2020 ರ ಕಾಯಿದೆಯಲ್ಲಿ ಇರಲಾರದ ನಿಯಮ ಅನ್ವಯಿಸಿಕೊಂಡು 2000 ದಿಂದ 3000ದಷ್ಟು ಕೆಲವು ಶಿಕ್ಷಕರಿಗೆ ಮೊದಲ ಅವಕಾಶ ನೀಡುವ ಉದ್ದೇಶದಿಂದ ಸುಮಾರು 72000 ಶಿಕ್ಷಕರ ವರ್ಗಾವಣೆ ಅರ್ಜಿಗಳನ್ನ ತಡೆ ಹಿಡಿದು ಇಡೀ ವರ್ಗಾವಣೆ ಪ್ರಕ್ರಿಯೆಯನ್ನ ನಿಲ್ಲಿಸಿದೆ ಆದರೆ ವಾಸ್ತವವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯವು ಕೇವಲ ನಿಯಮಾನುಸಾರ ಮಾಡಲು ಮಾತ್ರ ನಿರ್ದೆಶಿಸಿದೆ …ಹಾಗಾಗಿ ತಾವುಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ಆದೇಶದಂತೆ ನಿಯಮಾನುಸಾರ ವರ್ಗಾವಣೆ ಆರಂಭಿಸುವಂತೆ ಸರ್ಕಾರಕ್ಕೆ ನಿರ್ದೆಶನ ನೀಡುವಂತೆ ಈ ಮೂಲಕ ತಮ್ಮಲ್ಲಿ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ.