ಸುಳ್ಳಿಗೆ ಸತ್ಯದೇಟು ಕೊಟ್ಟ ಶಿಕ್ಷಕ ಸಿ.ಟಿ.ತಿಮ್ಮನಗೌಡ್ರ…!
1 min readಕುಂದಗೋಳ: ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸಲುವಾಗಿ ಶಿಕ್ಷಕರಿಂದ ಹಣ ಕಟಾವಣೆಯನ್ನ ಮಾಡಲು ತಾವೂ ಪರವಾನಿಗೆಯನ್ನ ಕೊಡುವುದಿಲ್ಲವೆಂದು ಕುಂದಗೋಳ ತಾಲೂಕಿನ ಕ.ರಾ.ಪ್ರಾ.ಶಾ.ಶಿ.ಸಂಘದ ಮಾಜಿ ಅಧ್ಯಕ್ಷ C.T. ತಿಮ್ಮನಗೌಡ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
200 ಕಟಾವಣೆ ಮಾಡದಂತೆ ಮನವಿ ಮಾಡಿಕೊಂಡಿರುವ ಶಿಕ್ಷಕರು ಏನಂದಿದ್ದಾರೆ ನೀವೇ ನೋಡಿ..
ಮಾನ್ಯರಾದ, ಕುಂದಗೋಳ ತಾಲೂಕಿನ ಗೌರವಾನ್ವಿತ ಶಿಕ್ಷಕ/ಶಿಕ್ಷಕಿಯರಲ್ಲಿ ಸಿ ಟಿ ತಿಮ್ಮನಗೌಡ್ರ ಮಾಜಿ ಅಧ್ಯಕ್ಷರು ಪ್ರಾ ಶಾ ಶಿಕ್ಷಕರ ಸಂಘ ತಾಲೂಕು ಕುಂದಗೋಳ ನಾನು ತಮ್ಮಲ್ಲಿ ಕೆಲವು ಪ್ರಾಮಾಣಿಕ ಅಭಿಪ್ರಾಯಗಳನ್ನು ಅರಿಕೆ ಮಾಡಿಕೊಳ್ಳುವೆನು. ಕಳೆದ ಸಂಘದ ಚುನಾವಣೆಯ ಮತದಾರರ ಪಟ್ಟಿಯಲ್ಲಿ, 140 ಕ್ಕಿಂತ ಹೆಚ್ಚು ಶಿಕ್ಷಕರಿಗೆ ಮತದಾನ ಹಕ್ಕನ್ನು ಮೊಟಕುಗೊಳಿಸಿದವರು ಯಾರು??? ಈ ಕುರಿತು ನಾವು ಲಿಖಿತ ಮನವಿಯನ್ನು ಮಾನ್ಯ ತಹಶೀಲ್ದಾರ್ ಕುಂದಗೋಳ ಇವರಿಗೆ ಕೊಟ್ಟಾಗ ಉತ್ತರ ಕೊಡಬೇಕಾದವರು ಲಿಖಿತವಾಗಿ ಕೊಡದಿರುವುದು ವಿಷಾದಕರ. ಸೇವೆಗೆ ಸೇರಿ ಕೇವಲ ಒಂದೆರಡು ವರ್ಷ ಆಗಿ ಅವರ ಸದಸ್ಯತ್ವ ಹಣ ಕಟಾವಣೆ ಆಗದಿದ್ದರೂ ಕೂಡ ಅವರಿಗೆ ಮತದಾನ ಹಕ್ಕು ಕೊಟ್ಟಿರುವುದು ಸುಳ್ಳೆ??? ನಂತರ ಕೆಲವು ಸೀನಿಯರ್ ಶಿಕ್ಷಕರ ವೇತನದಲ್ಲಿ ಸತತವಾಗಿ ಪ್ರತಿವರ್ಷ ₹ 200/-ಕಟಾವಣೆ ಆದರೂ ಕೂಡ ಮತದಾನ ಹಕ್ಕು ಮತ್ತು ಚುನಾವಣೆಗೆ ಸ್ಪದಿ೯ಸುವ ಹಕ್ಕನ್ನು ಕಸಿದುಕೊಂಡದ್ದು ಸುಳ್ಳೇ??? ಸರಕಾರದ ಮಾನ್ಯತೆ ಪಡೆದ ಸಂಘವೆಂಬ ಒಂದು ಲೇಬಲ್, ಇದ್ದವರು ಚುನಾವಣೆ ಸಮಯದಲ್ಲಿ ತಾಲೂಕಿನ ಎಲ್ಲ ಶಿಕ್ಷಕರ ಮನವೊಲಿಸಿ ಮತದಾನ ಹಕ್ಕನ್ನು ನೀಡಬಹುದಾಗಿತ್ತು ಅಲ್ಲವೇ ??? ನಮ್ಮ ವಂತಿಗೆ ಬೇಕು ಆದರೆ,ನಮಗೆ ಮತದಾನ ಹಕ್ಕು ಬೇಡವಾಗುವುದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುವುದಾದರೂ ಹೇಗೆ??? ಕೇವಲ ಸೇವೆಗೆ ಸೇರಿ ಒಂದೇರಡು ವಷ೯ ಆದವರಿಗೆ ಮತದಾನ ಹಕ್ಕು ಸಿಗುವಂತೆ ಮಾಡಿದವರಿಗೆ, ಎಲ್ಲ ಶಿಕ್ಷಕರು ಆವಾಗ ಸಮಾನರು ಅನಿಸಿಲ್ಲವೇ…ತಾವು ಮುಗ್ದ ಶಿಕ್ಷಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಸರಕಾರದ ಮಾನ್ಯತೆ ಸಂಘದ ಬೈಲಾದಲ್ಲಿ.ಇದಯೇ???ಈ ಅಭಿಪ್ರಾಯ ಗಳು ಸುಳ್ಳಾದರೆ ಹೇಳಿ,ನಾನು ಕ್ಷಮೆ ಕೇಳುವೆನು ??ಇಲ್ಲವಾದರೆ ಇದುವೇ ಕ್ಷಮಾಪಣೆ ಪತ್ರ ಎಂದು ತಿಳಿಯಿರಿ.
ಇಂತಿ,ನಿಮ್ಮವ ಸಿ ಟಿ ತಿಮ್ಮನಗೌಡ್ರ ಮಾಜಿ ಅಧ್ಯಕ್ಷರು ಪ್ರಾ ಶಾ ಶಿಕ್ಷಕರ ಸಂಘ ತಾಲೂಕು ಕುಂದಗೋಳ.ಮೊಬೈಲ್ ನಂ 8453888587