ಧಾರವಾಡ ಜಿಲ್ಲಾ ಗ್ರಾಮೀಣ ಶಿಕ್ಷಕರ ಸಂಘದಿಂದ ಯುಗಾದಿ ಕವಿಗೋಷ್ಠಿ..
1 min readಧಾರವಾಡ: ಜಿಲ್ಲಾ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ನೇತಾರ ಸಮಾವೇಶದಲ್ಲಿ ಜಿಲ್ಲಾ ಅಧ್ಯಕ್ಷ ಅಕ್ಬರಅಲಿ ಸೊಲ್ಲಾಪೂರ ಅಧ್ಯಕ್ಷತೆಯಲ್ಲಿ ಧಾರವಾಡ ನಗರದ ಛತ್ರಪತಿ ಶಿವಾಜಿ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ನಡೆದ ಯುಗಾದಿ ಕವಿಗೋಷ್ಠಿ ನಡೆಯಿತು.
ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಅಳ್ನಾವರ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ ತಾಲೂಕುಗಳಿಂದ ಶಿಕ್ಷಕ ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು. ರಾಜ್ಯ, ಜಿಲ್ಲೆಯ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಕವಿಗೋಷ್ಠಿಗಿಂತಲೂ ಉತ್ತಮ ಮಟ್ಟದಲ್ಲಿ ನಡೆದು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರರಾದರು. ಯುಗಾದಿ ಹಬ್ಬದ ವಿಶೇಷ ಕವನಗಳು ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನವಾಗಿ ಬರೆದು ಪ್ರಸ್ತುತ ಕಾಲದ ಜೊತೆಗೆ ಆದಿಕಾಲದ ಹೊಂದಿಕೆ ಮಾಡಿದ್ದ ಕವನ ವಾಚನಗಳು ತುಂಬಾ ಚೆನ್ನಾಗಿ ಮೂಡಿ ಬಂದವು.
ಅಥ೯ಪೂಣ೯ವಾದ ಈ ಕವಿಗೋಷ್ಟಿಯು ಸಾಹಿತ್ಯ ಪರಿಷತ್ತನ್ನು ಮಿರಿಸಿದೆ ಎಂದು ಅಲ್ಲಿ ಸೇರಿದ ಸಭಿಕರು ಮಾತನಾಡಿಕೊಳ್ಳುತ್ತಿದ್ದರು. ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಟಿಯಲ್ಲಿ ಪಾಲ್ಗೊಂಡ ಶಿಕ್ಷಕ ಕವಿಗಳು ಎಸ್.ಎಮ್. ಬಳ್ಳಾರಿ, ಪ್ರಕಾಶ ಹೂಗಾರ, ಎಸ್.ಎ. ಸಂಕೇಶ್ವರ, ನಾಗರಾಜ ತಳವಾರ, ರಂಜನಾ ಪಂಚಾಳ, ಅಕ್ಬರಅಲಿ ಸೊಲ್ಲಾಪೂರ, ವಿಜು ಆನಂದ ಸಾದನಿ, ಡಾ.ಆಶಾಬೇಗಂ ಮುನವಳ್ಳಿ, ಮಾಲತೇಶ ನಿಂಬಕ್ಕನವರ, ಚಂಪಾ ನರೇಗಲ್ಲ ಮಧುಮತಿ ಸಣಕಲ್ಲ, ಆತ್ಮಾನಂದ ಗದ್ದಿಕೇರಿ, ಜಿ ಬಿ ಶೆಟ್ಟಿ, ಶಿವು ಖನ್ನೂರ, ಲಕ್ಷ್ಮಣ ಕೊಡ್ಲಿವಾಡ, ಭೀಮರಾಶಿ ಹೂಗಾರ, ಎಸ್.ಎಸ್. ಧನಿಗೊಂಡ ಇವರೆಲ್ಲರು ಕವನ ವಾಚನ ಮಾಡಿದರು.
ಸಭೆಯ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಗುರು ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಮತ್ತು ಉದ್ಘಾಟಕರಾಗಿ ಎಸ್ ವಿ ಸಂಕನೂರ ವಿಧಾನ ಪರಿಷತ್ ಸದಸ್ಯರು ಆಗಮಿಸಿದ್ದರು. ರಾಜ್ಯಾಧ್ಯಕ್ಷ ಅಶೋಕ ಎಂ ಸಜ್ಜನ, ಎಲ್.ಐ.ಲಕ್ಕಮ್ಮನವರ, ಗೋವಿಂದ ಜುಜಾರೆ, ಬಾಬಾಜಾನ ಮುಲ್ಲಾ, ರಾಜೀವಸಿಂಗ ಹಲವಾಯಿ, ವಿ. ಜಿ. ಮುದಿಗೌಡರ, ಕೆ.ಎಮ್. ಮುನವಳ್ಳಿ, ಎಮ್.ಜಿ. ಯಾದೂಸಾಬನವರ, ಎ.ಐ. ಮುಳಗುಂದ, ಆನಂದ ದುಂದೂರ, ಶಂಭುಲಿಂಗ ಹೊಳೆಯಣ್ಣವರ, ಎಸ್.ಎ. ಜಾಧವ, ಎಚ್.ಕೆ. ಸುಲ್ತಾನಪುರಿ, ಎಂ.ಎಸ್. ಅಕ್ಕಿ, ಬಿ.ಕೆ. ಹಾಲವರ ,ಎಂ.ಎಲ್.ತೋಟಗೇರ, ಎಂ.ಬಿ.ಇಟಗಿ, ಎಸ್.ಎನ್. ಸಿಂಗೇನವರ ಮುಂತಾದ ಶಿಕ್ಷಕರು ಪಾಲ್ಗೊಂಡಿದ್ದರು.