ಶಿಕ್ಷಕರಿಗೆ ರಜೆ ಕೊಟ್ಟಿದ್ದೀರಿ- ಉಪನ್ಯಾಸಕರಿಗೂ ರಜೆ ಕೊಡಿ: ಸಿಎಂಗೆ ಮನವಿ ಮಾಡಿಕೊಂಡ ಸಂಘ
1 min readಬೆಂಗಳೂರು: ಕೋವಿಡ್ -19 ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರಕಾರ ಶಿಕ್ಷಕರ ಜೀವದ ದೃಷ್ಟಿಯನ್ನು ಇಟ್ಟುಕೊಂಡು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ October 30ವರೆಗೆ ರಜೆಯನ್ನು ಘೋಷಿಸಿರುವುದು ಸ್ವಾಗತಾರ್ಹ. ಇದರ ಜೊತೆಗೆ ಉಪನ್ಯಾಸಕರಿಗೂ ರಜೆಯನ್ನ ನೀಡಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.
D Ed, ITI, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರೂ ಕೂಡ ಪರೀಕ್ಷೆ ಕಾರ್ಯ, ಮೌಲ್ಯಮಾಪನ ಕಾರ್ಯಗಳ ಜೊತೆಗೆ ಅನೇಕ ಉಪನ್ಯಾಸಕರು ಕೋವಿಡ್-19 ಕರ್ತವ್ಯದ ಮೇಲೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಆನ್ ಲೈನ್ ತರಗತಿಗಳ ಮೇಲ್ವಿಚಾರಣೆ ಜೊತೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಕೊರೋನಾ ಮಹಾಮಾರಿ ಮತ್ತು ಮಳೆಗಾಲ ತೀವ್ರಗೊಂಡಿರುವುದರಿಂದ ಅನೇಕ ಉಪನ್ಯಾಸಕರಿಗೆ ಕೋವಿಡ್ ದೃಢಪಟ್ಟಿರುವುದು ಅತ್ಯಂತ ನೋವಿನ ಸಂಗತಿ.
ಈ ಹಿನ್ನೆಲೆಯಲ್ಲಿ ಪಿ.ಯು , D ed, ITI ಉಪನ್ಯಾಸಕರಿಗೂ ಸಹ October 30ರವೆಗೆ ದಸರಾ ರಜೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪಿ ಯು ನಿದೇ೯ಶಕರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ವತಿಯಿಂದ ಮನವಿ ಸಲಿಸಿತು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ABRSM ಶಿವಾನಂದ ಸಿಂಧನಕೇರಾ, ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ, ಕಾರ್ಯಾಧ್ಯಕ್ಷ ಹಾಗೂ MLC ಅರುಣ್ ಶಹಾಪೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ , ಸಹ ಪ್ರಧಾನ ಕಾರ್ಯದರ್ಶಿ ಗಂಗಾಧರಾಚಾರಿ, ಮಹಿಳಾ ಪ್ರಮುಖರಾದ ವಾಸುಕಿ ಜಿ.ಎನ್ ಉಪಸ್ಥಿತರಿದ್ದರು.