Posts Slider

Karnataka Voice

Latest Kannada News

ಗ್ರಾಮೀಣ ಶಿಕ್ಷಕರ ಸಂಘದಿಂದ ಮಕ್ಕಳಿಗೆ ಉಚಿತ ಫೈಲ್ ವಿತರಣೆ

Spread the love

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ  ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾಗಮ- 2 ರ ಅನುಸಾರ ಮಕ್ಕಳ ಕೃತಿ ಸಂಪುಟ ನಿರ್ವಹಿಸುವ ಸಲುವಾಗಿ ಬೋಧನಾ, ಕಲಿಕಾ ಚಟುವಟಿಕೆಗಳನ್ನು ದಾಖಲಿಸಲು ಕರ್ನಾಟಕ  ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಬಾಲಕಿಯರಿಗೆ ಉಚಿತವಾಗಿ ಫೈಲ್ ಗಳನ್ನು ವಿತರಿಸಲಾಯಿತು.

ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಉಚಿತ ಫೈಲ್ ವಿತರಿಸಿ ಮಾತನಾಡಿ, ಎಲ್ಲವನ್ನೂ ಸರ್ಕಾರದಿಂದ ಅಪೇಕ್ಷಿಸಿವುದು ತಪ್ಪು. ಈ ಸೇವಾ ಕಾರ್ಯ ನಮ್ಮೆಲ್ಲರ ಸೌಭಾಗ್ಯ. ದುಂದುವೆಚ್ಚಕ್ಕೆ ಆಡಂಬರಕ್ಕೆ ಕಡಿವಾಣ ಹಾಕಿ ಇಂಥ ಸೇವಾ ಕಾರ್ಯ ಮಾಡುವ ಅನೇಕ ಎನ್.ಜಿ.ಓ.ಗಳ ಸೇವೆ ಶ್ಲಾಘಿಸಿದರು. ನಾವೂ ಅಂಥವರೊಂದಿಗೆ ಕೈಲಾದಷ್ಟು ಕೈಜೋಡಿಸುವುದಾಗಿ ಹೇಳಿದರು.

ಉತ್ತಮ ಗುಣಮಟ್ಟದ ಕಲಿಕೆಗೆ ಸರ್ಕಾರದ ಹಾಗೂ ಶಿಕ್ಷಣದ ಆಶೋತ್ತರಗಳಿಗೆ ಹಾಗೂ ಗ್ರಾಮೀಣ ಶಿಕ್ಷಕರಿಗೆ ಶಾಲೆಗಳಿಗೆ ಮಕ್ಕಳಿಗೆ ಸದಾ ಸ್ಪಂದನಾಶೀಲತೆಯಿಂದ ಇರುವುದೇ ನಮ್ಮ ಸಂಘದ ಹೆಗ್ಗುರಿ ಎಂದರು.

 ಎಸ್.ಡಿ.ಎಮ್.ಸಿ ಪದಾಧಿಕಾರಿಳಾದ ಅಶ್ವಿನಿ ಕೊಣ್ಣೂರ, ಬಸವರಾಜ ಭೂಮಣ್ಣವರ, ಹನುಮರಡ್ಡಿ ಬಲ್ಲರವಾಡ, ಲಾಡಸಾಬ ಶೇಖಸನದಿ, ಮಂಜುನಾಥ ಹಡಪದ, ಬಿ.ಕೆ.ಮುದರಡ್ಡಿ, ಸೋನಗಜ ಈಟಿ ಪೀರಖಾನವರ ಹಾಗೂ ಶಾಲಾ ಪ್ರ.ಗು.ಎಸ್.ಎಲ್.ಬೆಟಗೇರಿ, ಸ.ಶಿ.ಎಲ್.ಆರ್.ಗ್ರಾಮಪುರೋಹಿತ, ಎಸ್.ಜಿ.ಕಂಬಳಿ, ಎಮ್.ಎಮ್.ಮಾಡೊಳ್ಳಿ, ಡಿ.ಎಮ್.ಪತ್ತಾರ, ಡಿ.ಎಸ್.ಕೊರಗರ, ಎಸ್.ಎಸ್.ಮಡಿವಾಳರ, ಎಸ್.ಎಚ್.ಕೊಣ್ಣೂರ ಹಾಗೂ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *