Posts Slider

Karnataka Voice

Latest Kannada News

ಶಿಕ್ಷಕ ದಂಪತಿಗಳ ಸಮಾಜ ಸೇವೆ: ಹೆಂಗಿದೆ ಗೊತ್ತಾ ಶಿಕ್ಷಕರಿಬ್ಬರ ಮನಸ್ಸಿನ ಭಾವನೆ…!

1 min read
Spread the love

ಕೋಲಾರ: ಕೊರೋನಾದಿಂದ ಇಡೀ ವಿಶ್ವಕ್ಕೆ ಸಂಕಷ್ಟ ಎದುರಾಗಿದ್ರೆ, ಅಫ್ಘಾನಿಸ್ತಾನಕ್ಕೆ ಉಗ್ರರಿಂದ ಸಂಕಷ್ಟ ಬಂದಿದೆ. ಇಂತಹ ಸಂಕಷ್ಟದಲ್ಲಿ ವಿಘ್ನವಿನಾಶಕ, ಸಂಕಷ್ಟ ನಿವಾರಕ ಗಣೇಶನನ್ನ ಸಮಾಜ ಸೇವೆ ಮಾಡುವ ಮೂಲಕ ಇಲ್ಲೊಂದು ಶಿಕ್ಷಕ ದಂಪತಿಗಳು ಗಣೇಶ ಹಬ್ಬವನ್ನ ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ರೇಣುಕಾಯಲ್ಲಮ್ಮ ಬಡಾವಣೆಯ ಶಿಕ್ಷಕರಾದ ದಯಾನಂದ್ ಮತ್ತು ಕೋಮಲಾ ದಂಪತಿಗಳು ಕಳೆದ 23 ವರ್ಷಗಳಿಂದ ಗಣೇಶ ಚತುರ್ಥಿಯನ್ನು ಹೀಗೆ ವಿಶೇಷವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಗಣೇಶ ಹಬ್ಬಕ್ಕಿಂತ ಇದನ್ನ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವ ಹಬ್ಬ ಅನ್ನೋ ಭಾವನೆ ಈ ಶಿಕ್ಷಕರಲ್ಲಿದೆ. ಹಾಗಾಗಿ ಈ ದಂಪತಿಗಳು ತಮ್ಮ ಮನೆಯ ಹಾಲ್‌ನಲ್ಲಿ ಹಲವು ವಸ್ತುಗಳನ್ನು ಬಳಸಿಕೊಂಡು ತಮ್ಮದೇ  ಶೈಲಿಯಲ್ಲಿ ಗಣೇಶನ ಮುಂದಿಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ.

ಈ ಬಾರಿ ಅಫ್ಘಾನಿಸ್ತಾನವನ್ನ ಉಗ್ರರು ವಶಕ್ಕೆ ಪಡೆದ ಹಿನ್ನೆಲೆ ಅಲ್ಲಿರುವ ಭಾರತೀಯರನ್ನ ಉಗ್ರರಿಂದ ರಕ್ಷಿಸುವ ದೇವಿ ಶಕ್ತಿ ಗಣಪ, ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸುತ್ತಿರುವ ಗಣಪ, ಕೊರೊನಾ ಸಂಕಷ್ಟದ ಮಧ್ಯೆ ಶಾಲೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅಭಯ ನೀಡುತ್ತಿರುವ ಗಣಪನನ್ನ ತಮ್ಮದೇ ಶೈಲಿ, ಕಲ್ಪನೆಯಲ್ಲಿ ನಿರ್ಮಾಣ ಮಾಡಿದ್ದಾರೆ. ಇನ್ನು ಕಾಬೂಲ್‌ನಲ್ಲಿ ವಿಮಾನದಿಂದ ಬೀಳುತ್ತಿರುವ ಜನರನ್ನು ರಕ್ಷಣೆ ಮಾಡುತ್ತಿರುವ ಗಣಪ ಸೇರಿದಂತೆ ಕಾಬೂಲ್ ವಿಮಾನ ನಿಲ್ದಾಣವನ್ನ ನಿರ್ಮಾಣ ಮಾಡಿ ಸ್ಪೆಷಲ್ ಆಗಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಇನ್ನೂ ಕಳೆದ 23 ವರ್ಷಗಳಿಂದ ಪ್ರಚಲಿತ ವಿದ್ಯಾಮಾನಗಳನ್ನ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ರೀತಿಯ ವಿಭಿನ್ನ ಗಣೇಶನನ್ನ ಮಾಡಿ ಪ್ರಾರ್ಥಿಸುವ ಜೊತೆಗೆ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುವ ಪ್ರಯತ್ನವನ್ನ ಈ ಕುಟುಂಬ ಮಾಡುತ್ತಿದೆ.

ಗಣೇಶ ಹಬ್ಬ ಹತ್ತಿರುವಾಗುತ್ತಿದ್ದಂತೆ ಇಬ್ಬರು ಶಿಕ್ಷಕ ದಂಪತಿಗಳ ಜೊತೆಗೆ ತಮ್ಮ ಪುಟಾಣಿ ಮಕ್ಕಳೊಂದಿಗೆ ಗಣೇಶ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡುತ್ತಿದೆ. ಇನ್ನೂ ಮನೆಯ ಆವರಣವನ್ನೆ ಕಾಬೂಲ್ ವಿಮಾನ ನಿಲ್ದಾಣದಂತೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಆ ಮೂಲಕ ಸಮಾಜದ ಸಮಸ್ಯೆಗಳಿಗೆ ಹಾಗೂ ಯುವಕರಿಗೆ ಸ್ಪೂರ್ತಿ ತುಂಬುವ ಗಣೇಶನನ್ನ ತಮ್ಮ ಕಲ್ಪನೆಯಂತೆ ನಿರ್ಮಾಣ ಮಾಡಿ ಆ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಇವರದ್ದಾಗಿದೆ. ಚಿತ್ರಕಲಾ ಶಿಕ್ಷಕ ದಯಾನಂದ್, ಶಿಕ್ಷಕಿಯಾಗಿರುವ ಪತ್ನಿ ಕೋಮಲಾರ ಶ್ರಮ, ಶ್ರದ್ದೆ, ಅವರ ಸಮಾಜ ಪರ ಕಾಳಜಿಯಿಂದ ಇಂತಹ ಪ್ರಯತ್ನ ಯಶಸ್ವಿಯಾಗಿ ಮೂಡಿ ಬರುತ್ತಿದೆ. ವಿಶೇಷವಾಗಿ ಈ ಬಾರಿ ಕೊರೊನಾದಿಂದ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ, ಅತ್ಯಾಚಾರಿಗಳಿಗೆ ಶಿಕ್ಷೆ ನೀಡುತ್ತಿರುವ ಗಣಪ ಗಮನ ಸೆಳೆಯುತ್ತಿದೆ.


Spread the love

Leave a Reply

Your email address will not be published. Required fields are marked *

You may have missed