ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗೆ ಬಂಪರ್…!

ಬೆಂಗಳೂರು: 2020ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳ ಅಭಿವೃದ್ಧಿಗೆ ಅನುದಾನವನ್ನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಕುರಿತು ಅಧಿಕೃತವಾದ ಆದೇಶವೊಂದನ್ನ ಹೊರಡಿಸಿರುವ ಇಲಾಖೆಯು, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ 31 ಶಿಕ್ಷಕರ ಶಾಲೆಗಳಿಗೆ 50 ಸಾವಿರ ರೂಪಾಯಿಯನ್ನ ಅನುದಾನವನ್ನ ನೀಡಲು ಮುಂದಾಗಿದೆ.
ಈ ಕುರಿತು ಎಲ್ಲ ಶಾಲೆಗಳಿಗೆ ಐವತ್ತು ಸಾವಿರದಂತೆ ಹಣ ಕೊಡಲಾಗುತ್ತಿದ್ದು, ಅದು ಬಂದ ತಕ್ಷಣವೇ ಇಲಾಖೆಗೆ ಬ್ಯಾಂಕ್ ಪಾಸ್ ಬುಕ್ ಸಮೇತ ಮಾಹಿತಿಯನ್ನ ನೀಡುವಂತೆ ಕೋರಲಾಗಿದೆ.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ಮೂಲಕ, ಶಾಲೆಯ ಅಭಿವೃದ್ಧಿಗೂ ಪೂರಕವಾದ ಹಣವನ್ನ ಸರಕಾರ ಕೊಡಲು ಮುಂದಾಗಿರುವುದು ಪ್ರಶಸ್ತಿ ಪುರಸ್ಕೃತ ಶಿಕ್ಷಕರಲ್ಲಿ ಮತ್ತಷ್ಟು ಸಂತಸ ಮೂಡಿಸಿದೆ.