ಬಜೆಟ್ ನಲ್ಲಿ 7ನೇ ವೇತನ ಆಯೋಗದ ಪ್ರಸ್ತಾಪವೇ ಇಲ್ಲಾ: ಗ್ರಾಮೀಣ ಶಿಕ್ಷಕರ ಸಂಘ ಹೇಳಿದ್ದೇನು..
1 min readಧಾರವಾಡ: ಕೇಂದ್ರ ವೇತನ ಮಾದರಿಯಲ್ಲಿ ರಾಜ್ಯದಲ್ಲಿ 7 ನೇ ವೇತನ ಪರಿಷ್ಕರಣೆ ಮಾಡಬೇಕು ಹಾಗೂ ಓ.ಪಿ.ಎಸ್ ಜಾರಿಗೊಳಿಸಬೇಕೆಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಷರಆಲಿ ಸೊಲ್ಲಾಪೂರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ 4 ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು 2022-23 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ 7 ನೇ ವೇತನದ ಜೊತೆಗೆ ಯಾವುದೇ ಬೇಡಿಕೆಗಳು ಪ್ರಸ್ತಾಪ ಆಗದೇ ಇರುವುದು ಸರಕಾರಿ ಶಿಕ್ಷಕ ನೌಕರರಲ್ಲಿ ತುಂಬಾ ಆತಂಕ ಮತ್ತು ನಿರಾಸೆಯನ್ನು ಮೂಡಿಸಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಾ ವಸ್ತಗಳ ಬೆಲೆ ಏರಿಕೆ ದುಬಾರಿಯಾಗಿದೆ. ಸದ್ಯದ ವೇತನದಲ್ಲಿ ಬದುಕು ನಡೆಸುವುದು ತುಂಬಾ ಕಷ್ಟಕರವಾಗಿದೆ. ಮನೆಯಲ್ಲಿ ವಯಸ್ಸಾದ ಹಿರಿಯರ ಆರೈಕೆ, ಅನಾರೋಗ್ಯ, ಬಾಡಿಗೆ ಮನೆ, ದಿನ ಬಳಕೆ ವಸ್ತುಗಳ ಖರೀದಿ, ವಾಹನ ಖರೀದಿ, ಶಾಲಾ ಕಾಲೇಜುಗಳ ಶುಲ್ಕ ಮತ್ತು ಮನೆ ಕಟ್ಟಲು ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ತೀರಿಸುವುದೇ ಆಗಿದೆ. ಇಂತಹ ದುಃಸ್ಥಿತಿಯಲ್ಲಿ ಶಿಕ್ಷಕ ನೌಕರರು ಸಾಲಗಾರರಾಗಿದ್ದು, ಬೆಲೆ ಏರಿಕೆ ಸಂದರ್ಭದಲ್ಲಿ ಎಲ್ಲವೂ ಗಗನ ಕುಸುಮವಾಗಿದೆ ಎಂದಿದ್ದಾರೆ.
ಇಂತಹ ಸಂದರ್ಭದಲ್ಲಿ ತುಂಬ ಭರವಸೆ ಇಟ್ಟುಕೊಂಡಿರುವುದು ನಮ್ಮ ಹೆಮ್ಮೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಯವರನ್ನು ಈ ಹಿಂದೆ ಬೆಂಗಳೂರಿನ ನೌಕರರ ಭವನದಲ್ಲಿ ಎಲ್ಲ ಅಂಗ ಸಂಘಗಳನ್ನು ಒಟ್ಟುಗೂಡಿಸಿ ರಾಜ್ಯಮಟ್ಟದ ಬೃಹತ್ ಸಮಾವೇಶ ಮಾಡಿದ್ದರು. ಆ ಸಂದರ್ಭದಲ್ಲಿ ಹುಟ್ಟು ಹಾಕಿದ ಕನಸುಗಳು ಚಿಗುರೊಡೆದು ಫಲ ನೀಡಲೇಯಿಲ್ಲ. ಈ ಬರುವ ಎಪ್ರೀಲ್ 10ರ ಒಳಗಾಗಿ ಎಲ್ಲ ಅಂಗ ಸಂಘಗಳನ್ನು ಒಟ್ಟಿಗೆ ಸೇರಿಸಿ ಹೋರಾಟಕ್ಕೆ ಕರೆ ಕೊಟ್ಟು, 7 ನೇ ವೇತನ, ಕೇಂದ್ರ ಸಮಾನ ವೇತನ, ಓ.ಪಿ.ಎಸ್ ಜಾರಿ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಷರಆಲಿ ಸೊಲ್ಲಾಪೂರ ಆಗ್ರಹಿಸಿದರು.
ಬೇರೆ ರಾಜ್ಯಗಳಲ್ಲಿ ಇಲ್ಲದ ವೇತನ ತಾರತಮ್ಯ ನಮ್ಮ ರಾಜ್ಯದಲ್ಲಿ ಅಷ್ಟೇ ಏಕೆ..? ಶಿಕ್ಷಕ ನೌಕರರ ಬಗೆಗಿನ ಕಾಳಜಿ ಸಂಘ ಮತ್ತು ಸರಕಾರದ ಮೇಲಿರುವ ಭರವಸೆಯು ಕಡಿಮೆಯಾಗಿದೆ. ಶಿಕ್ಷಕ ನೌಕರರ ವಲಯದಲ್ಲಿ ಕೇಳಿ ಬರುತ್ತದೆ . ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕವು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಯವರಿಗೆ, ಈ ಮೂಲಕ ಮನವಿ ಮಾಡಿಕೊಳ್ಳುವುದೆನೆಂದರೆ, ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಂ. ಸಜ್ಜನ ರವರು ತಮಗೆ ಮನವಿಯನ್ನು ಮಾಡಿರುತ್ತಾರೆ. ಅದೇ ರೀತಿಯಾಗಿ ಧಾರವಾಡ ಜಿಲ್ಲಾ ಘಟಕದ ವತಿಯಿಂದ 7ನೇ ವೇತನ ಪರಿಷ್ಕರಣೆಯ ಜೊತೆಗೆ ಈ ಮೇಲಿನ ಎಲ್ಲ ಬೇಡಿಕೆಗಳ ಕುರಿತು ಈ ಕೂಡಲೇ ಹೋರಾಟಕ್ಕೆ ಕರೆ ಕೊಡಬೇಕು ನ್ಯಾಯ ಒದಗಿಸುವುದಾಗಬೇಕು. ಈಗಾಗಲೇ ಹೋರಾಡುವ ದಿಸೆಯನ್ನು ಬದಲಿಸಿ ಶಾಂತಿಯುತವಾಗಿ ಬಗೆಹರಿಸುವುದಾಗಿ ಹೇಳಿದ್ದಾರೆ. ಅವು ಯಾವುವು ಇತ್ಯರ್ಥವಾಗದೆ ಇರುವುದರಿಂದ ಈಗ ಹೋರಾಟಕ್ಕೆ ಕರೆ ಕೊಡುವುದು ಅನಿವಾರ್ಯ. ನೂತನ ಬಜೆಟಿನಲ್ಲಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 500 ಕೋಟಿ ಅನುದಾನ ಮೀಸಲಾಗಿರಿಸಿದೆ. ನೂತನ ಪಠ್ಯಕ್ರಮ, ಹೋಬಳಿ ಮಟ್ಟದಲ್ಲಿ ಮಾದರಿ ಶಾಲಾ ಯೋಜನೆಯ ಕುರಿತು ರಾಜ್ಯ ಬಜೆಟ್‌ನಲ್ಲಿ ಮಂಡನೆಯಾಗಿದ್ದು ಸ್ವಾಗತಾರ್ಹ ಎಂದರು
ಈ ಕೂಡಲೇ ಸರ್ಕಾರವು ನಮ್ಮ ಬೇಡಿಕೆಗಳ ಕಡೆ ಹೆಚ್ಚು ಗಮನ ಹರಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ತಾವು ಬೇಗ ಇತ್ಯರ್ಥ ಪಡಿಸುವಲ್ಲಿ ವಿಳಂಬ ಮಾಡಿದರೆ ಕರ್ನಾಟಕ ಸರಕಾರಿ, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಬರುವ ಎಪ್ರೀಲ್, ಮೇ ತಿಂಗಳ ಬೇಸಿಗೆ ರಜೆಯಿದ್ದು, ಶಿಕ್ಷಕರನ್ನು ಒಟ್ಟಿಗೆ ಸೇರಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಡುತ್ತೇವೆ. ತಾವು ಭರವಸೆ ಕೊಟ್ಟಿದ್ದು ಸಾಕು ನ್ಯಾಯಬೇಕು ಎಂಬುವುದು ನಮ್ಮ ನಿಲುವಾಗಿದೆ . ಆದಷ್ಟು ಶೀಘ್ರ ಉತ್ತರವನ್ನು ಅಪೇಕ್ಷಿಸುತ್ತೇವೆ ಎಂದು ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಷರಲಿ ಸೊಲ್ಲಾಪೂರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗೌರವಧ್ಯಕ್ಷ ಮಲ್ಲಿಕಾರ್ಜುನ ಉಪ್ಪಿನ, ರವಿ ಬಂಗೆನ್ನವರ, ವಿಜಿ ಕೆ.ಎಂ.ಮುನವಳ್ಳಿ, ಎಂ.ಬಿ.ಯಾದುಸಾಬನವರ, ಎಲ್.ಐ.ಲಕ್ಕಮ್ಮನವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುದಿಗೌಡರ, ರಾಜೀವಸಿಂಗ್ ಹಲವಾಯಿ, ಮುದಿಗೌಡರ, ಎಸ್.ಎಸ್.ಧನಿಗೊಂಡ, ರಮಾನಂದ ಹುಲ್ಲೂರ, ಕಲ್ಪನಾ ಚಂದನಕರ, ಶಿವಲೀಲಾ ಪೂಜಾರ, ಎ.ಐ.ಮುಳಗುಂದ, ಮಹೇಶ ಭೂಮನಗೌಡರ ಮುಂತಾದವರು ಉಪಸ್ಥಿತರಿದ್ದರು.