ಮಳೆಯಲ್ಲೂ ಶಿಕ್ಷಣ- ಇಂಥ ಶಿಕ್ಷಕಿಯರಿಗೆ ನಿಮ್ಮದೊಂದು ಸೆಲ್ಯೂಟ್ ಇರಲಿ..!
ಧಾರವಾಡ: ಸರಕಾರದ ಕೆಲಸ ದೇವರ ಕೆಲಸ ಎಂದು ಅರಿತುಕೊಂಡು ಚಾಚುತಪ್ಪದೇ ಪಾಲಿಸುತ್ತಿರುವುದು ಶಿಕ್ಷಕರು ಎನ್ನುವುದನ್ನ ನಾವೂ ಅರಿತುಕೊಳ್ಳಬೇಕಿದೆ. ಹಲವು ಸಮಸ್ಯೆಗಳ ನಡುವೆಯೂ ಅವರೇಗೆ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ತಲ್ಲೀನರಾಗಿದ್ದಾರೆಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ ನೋಡಿ.. ಇವರಿಗೊಂದು ಧನ್ಯವಾದ ತಿಳಿಸಿ..
ಧಾರವಾಡದಿಂದ ಕಲ್ಲಾಪುರ ಶಾಲೆಗೆ ಹೋಗುವ ಕಲ್ಪನಾ ಚಂದನಕರ ಹಾಗೂ ವೀರಾಪುರ ಸರಕಾರಿ ಶಾಲೆಗೆ ಹೋಗುವ ವಡ್ಡಟ್ಟಿ ಟೀಚರ್ ಹೇಗೆ ಶಾಲೆಗಳನ್ನ ತಲುಪುತ್ತಿದ್ದಾರೆ ನೋಡಿ. ನಿರಂತರ ಸುರಿಯುವ ಮಳೆಯಲ್ಲೂ ರಸ್ತೆ ಮಧ್ಯೆ ಬಸ್ ನಿಂತರೂ ಶಾಲೆಗಳಿಗೆ ಹೋಗುವುದನ್ನ ಬಿಟ್ಟಿಲ್ಲ. ಏನಾದರೂ ಆಗಲಿ, ಮಕ್ಕಳಿಗೆ ವಿದ್ಯಾಭ್ಯಾಸ್ ನೀಡಬೇಕೆಂಬ ಮನೋಭಾವನೆ ಇವರದ್ದು.
ವಿದ್ಯಾಗಮ ಯೋಜನೆ ನಿರಂತರವಾಗಿ ಯಶಸ್ವಿಯಾಗುತ್ತಿರುವುದಕ್ಕೆ ಇಂತಹ ಶಿಕ್ಷಕರ ಕಾರ್ಯಕ್ಷಮತೆಯೇ ಕಾರಣ. ತಮಗೆ ಯಾವುದೇ ರೀತಿಯ ಕಷ್ಟಗಳಾದರೂ ಅದನ್ನ ಯಾರಿಗೂ ಹೇಳದೇ ನಡೆಯುವ ಶಿಕ್ಷಕರ ಮನಸ್ಥಿತಿ ಮೆಚ್ಚುವಂತಹದು.
ಕಲ್ಲಾಪುರ-ವೀರಾಪುರ ಗ್ರಾಮಕ್ಕೆ ಹೋಗಬೇಕಾದರೇ ಹಳ್ಳದ ನೀರು, ರಸ್ತೆಯನ್ನ ನುಂಗಿ ಬಿಡುತ್ತೆ. ಆಗ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲೇ ಗ್ರಾಮಗಳಿಗೆ ಹೋಗಿ ಶಿಕ್ಷಣ ಕೊಡುತ್ತಿದ್ದಾರೆ. ಕೊರೋನಾ ಹೆಚ್ಚುತ್ತಿರುವ ಸಮಯದಲ್ಲಿಯೂ ಮಳೆ-ಗಾಳಿಗೂ ಬೆದರದೇ ಸರಸ್ವತಿಯ ಸೇವೆ ಸಲ್ಲಿಸುತ್ತಿರುವ ನಡೆದಾಡುವ ದೇವರುಗಳಿವರು.. ಹ್ಯಾಟ್ಸಾಫ್ ಶಿಕ್ಷಕ-ಶಿಕ್ಷಕಿಯರೇ.. ನೀವೂ ನೂರ್ಕಾಲ ಚೆನ್ನಾಗಿ ಬಾಳಿ..