ಧಾರವಾಡ ಜಿಲ್ಲೆಯಲ್ಲಿ ಮೂವರು ಸರಕಾರಿ ಶಾಲೆ ಶಿಕ್ಷಕರ ಸಾವು…!

ಧಾರವಾಡ: ತಾಲೂಕಿನ ಬೆಣಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಅನಾರೋಗ್ಯದಿಂದ ಇಂದು ಬೆಳಿಗ್ಗೆ ಸಾವಿಗೀಡಾಗಿದ್ದು, ಶಿಕ್ಷಣ ಇಲಾಖೆಯಲ್ಲಿ ತೀವ್ರ ಬೇಸರ ಮೂಡಿಸಿದೆ.

ಸದಕಾಲ ಹಸನ್ಮುಖಿಯಾಗಿರುತ್ತಿದ್ದ ಮುಖ್ಯಾಧ್ಯಾಪಕಿ ಶಾರದಾ.ಎಂ.ಕಿತ್ತೂರು (ಬಸ್ತವಾಡ್ಕರ) ಅವರೇ ಇಂದು ಬೆಳಿಗ್ಗೆ ಸಾವಿಗೀಡಾಗಿದ್ದು, ಅನಾರೋಗ್ಯದಿಂದ ಇನ್ನಿಲ್ಲವಾಗಿರುವ ಶಾರದಾ ಅವರ ಘಟನೆಯಿಂದ ಶಿಕ್ಷಕರು, ಕಣ್ಣೀರಾಗಿದ್ದಾರೆ.
ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಲತಾ ಪೂಜಾರ ಕೂಡಾ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನ ಬೆಳೆಸಬೇಕೆಂಬ ಕನಸು ಕಂಡಿದ್ದ ಶಿಕ್ಷಕಿ ಇನ್ನಿಲ್ಲವಾಗಿರುವುದು ತೀವ್ರ ಬೇಸರದ ಸಂಗತಿಯಾಗಿದೆ.

ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಅಂಗಡಿ ಸಾವಿಗೀಡಾದ ಶಿಕ್ಷಕರಾಗಿದ್ದಾರೆ. ಕಳೆದ ಒಂದು ವಾರದಿಂದ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಶಿಕ್ಷಕರು ಶುಕ್ರವಾರ ಕಿಮ್ಸಗೆ ತರುವಾಗಲೇ ಕೊನೆಯುಸಿರೆಳೆದಿದ್ದಾರೆ.
ಶಿಕ್ಷಕ ಸುರೇಶ ಅಂಗಡಿ, ಸದಾಕಾಲ ವಿದ್ಯಾರ್ಥಿಗಳ ಒಡನಾಡಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಕೊರೋನಾ ಸಮಯದಲ್ಲೂ ನಿರಂತರವಾಗಿ ಶಾಲೆಗೆ ಹೋಗಿ ಬರುತ್ತಿದ್ದರು.
ಮೃತ ಶಿಕ್ಷಕರ ಸಾವಿಗೆ ಗ್ರಾಮೀಣ ಸಂಘವೂ ಸೇರಿದಂತೆ ಶಿಕ್ಷಕ ಸಮೂಹ ತೀವ್ರ ಸಂತಾಪ ಸೂಚಿಸಿದೆ.