Karnataka Voice

Latest Kannada News

ಇಬ್ಬರು ಮಹಿಳಾ ಶಿಕ್ಷಕಿಯರು ಸೇರಿ ಮೂವರು ಶಿಕ್ಷಕರು ಕೋವಿಡ್ ಗೆ ಬಲಿ…!

Spread the love

ಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿ ಶಿಕ್ಷಕ ಸಮೂಹ ಪ್ರತಿದಿನವೂ ಹಲವರನ್ನ ಕಳೆದುಕೊಳ್ಳುತ್ತಿದೆ. ಕಳೆದ 18ಗಂಟೆಗಳಲ್ಲಿ ಮೂವರು ಶಿಕ್ಷಕರನ್ನ ಇಲಾಖೆ ಕೊರೋನಾದಿಂದ ಕಳೆದುಕೊಂಡಿದ್ದು, ಅದರಲ್ಲಿಬ್ಬರು ಮಹಿಳಾ ಶಿಕ್ಷಕಿಯರಿದ್ದಾರೆ.

ಕನಕಪುರ ತಾಲೂಕಿನ ಅತ್ತಿಹಳ್ಳಿ ಸರಕಾರಿ ಪ್ರೌಢ ಶಾಲೆಯ ಜಯಲಕ್ಷ್ಮೀ ಹಾಗೂ ಇದೇ ತಾಲೂಕಿನ ಗುರಿಕಾರ ದೊಡ್ಡಿ ಬಾಲಕಿಯರ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಮೀಳಾ ಅವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹಿರೇವಡ್ಡಟ್ಟಿ ಕೆ.ಕೆ.ನಂದಿಕೋಲ ಪ್ರೌಢಶಾಲೆಯ ಶಿಕ್ಷಕ ಬಸವರಾಜ ಚೆನ್ನಪ್ಪಗೌಡರ ಕೂಡಾ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಶಿಕ್ಷಕರ ಸಾವುಗಳು ಪ್ರತಿದಿನವೂ ನಿರಂತರವಾಗಿ ನಡೆಯುತ್ತಲೇ ಇದ್ದು, ಶಿಕ್ಷಕ ಸಮೂಹ ಭಯದಲ್ಲಿ ಮುಳುಗುವಂತಾಗಿದೆ. ಕೆಲವರ ಪ್ರಕಾರ ಕೊರೋನಾ ಹೆಚ್ಚಿದ ಸಮಯದಲ್ಲಿ ಶಾಲೆಗಳಿಗೆ ಶಿಕ್ಷಕರು ಹೋಗುವ ಅನಿವಾರ್ಯತೆ ಸೃಷ್ಠಿಸಿದ ಸರಕಾರವೇ ಹೊಣೆ ಎಂದು ಹೇಳಲಾಗುತ್ತಿದೆ. ಮಕ್ಕಳು ಬರದೇ ಇದ್ದರೂ, ಸಾರಿಗೆ ಸಂಸ್ಥೆಯ ಬಸ್ ಬಂದ್ ಇದ್ದರೂ ಶಾಲೆಗಳಿಗೆ ಶಿಕ್ಷಕರು ಸಿಕ್ಕ ಸಿಕ್ಕ ವಾಹನಗಳಲ್ಲಿ ಸಂಚರಿಸಿದ್ದೆ ಇವತ್ತಿನ ಆವಾಂತರಕ್ಕೆ ಕಾರಣವೆನ್ನಲಾಗುತ್ತಿದೆ.


Spread the love

Leave a Reply

Your email address will not be published. Required fields are marked *