Posts Slider

Karnataka Voice

Latest Kannada News

ದಾರಿ ತಪ್ಪಿದ “ಧಾರವಾಡ ಡಿಡಿಪಿಐ”: ಒಂದು ಸಂಘದ ಕೈಗೊಂಬೆಯಂತೆ ವರ್ತನೆ…!!!

Spread the love

ಶಿಕ್ಷಕರ ದಿನಾಚರಣೆಯೋ? ಅವಕಾಶ ಸಿಕ್ಕವರ ದಿನಾಚರಣೆಯೋ?

ಧಾರವಾಡ ಜಿಲ್ಲಾಡಳಿತದ ಶಿಕ್ಷಕರ ದಿನಾಚರಣೆ ಕ್ರಮವನ್ನು ವಿರೋಧಿಸಿದ ಜಿಲ್ಲೆಯ ವಿವಿಧ ಶಿಕ್ಷಕರ ಸಂಘಟನೆಗಳು

ಧಾರವಾಡ: ಜಿಲ್ಲೆಯ ಜಿಲ್ಲಾಡಳಿತದ ವತಿಯಿಂದ ನಾಳೆ ದಿನಾಂಕ 5 ರಂದು ನಡೆಯುತ್ತಿರುವ ಶಿಕ್ಷಕರ ದಿನಾಚರಣೆಯು ಇಲಾಖೆಯ ವತಿಯಿಂದ ನಡೆಯುತ್ತಿರುವ ಶಿಕ್ಷಕರ ದಿನಾಚರಣೆಯಾಗದೇ ಒಂದು ಶಿಕ್ಷಕರ ಸಂಘದ ಅಣತಯಂತೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಎಲ್ಲ ಶಿಕ್ಷಕರ ಸಂಘಗಳನ್ನು ಸಮಾನ ದೃಷ್ಠಿಯಿಂದ ನೋಡಬೇಕಾದ ಇಲಾಖೆಯ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿರುವುದ ಖೇದಕರ ಸಂಗತಿಯಾಗಿದೆ.

ಈ ಕುರಿತು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಅವಕಾಶ ಸಿಕ್ಕವರ ದಿನಾಚರಣೆ ಆಗದೆ ಸರ್ವ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಆಗಬೇಕು ಈ ದಿಶೆಯಲ್ಲಿ ಜಿಲ್ಲೆಯ ಜಿಲ್ಲಾಡಳಿತದ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಗುರು ತಿಗಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ ಯ ರಾಜ್ಯಾಧ್ಯಕ್ಷ ಅಶೋಕ ಸಜ್ಜನರನ್ನು ಕೇಳಿದಾಗ ಅವರು, ಇಲಾಖೆ ನಮ್ಮ ತಾಯಿ ಇದ್ದ ಹಾಗೆ ತಾಯಿ ತನ್ನ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ನೀಡಬೇಕು. ಧಾರವಾಡ ಜಿಲ್ಲೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದ ನಿಜಕ್ಕೂ ಖೇದಕರ ಇನ್ನು ಮುಂದೆಯಾದರೂ ಶಿಕ್ಷಕರ ದಿನಾಚರಣೆಯ ಆಚರಣೆ ಅರ್ಥ ಪೂರ್ಣವಾಗಿರಲಿ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಗಟ್ಟಿ ಅವರು, ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಎಲ್ಲ ಶಿಕ್ಷಕರ ಸಂಘಗಳಿಗೆ ಸಮಾನ ಅವಕಾಶ ನೀಡಲಾಗಿದ್ದು ಧಾರವಾಡ ಜಿಲ್ಲೆಯ ಕಾರ್ಯಕ್ರಮ ಒಂದು ಸಂಘಟನೆ ಕಾರ್ಯಕ್ರಮ ಆಗಿದ್ದನ್ನು ನಾವು ಖಂಡಿಸುತ್ತೇವೆ ಎಂದರು.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ರವರು, ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಶಿಕ್ಷಕರಿಂದ ಅರ್ಜಿ ಪಡೆದು ಜಿಲ್ಲಾಡಳಿತದ ಆಯ್ಕೆ ಮಾಡಿದ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದ್ದು ಇದೆ ವೇದಿಕೆಯಲ್ಲಿ ಶಿಕ್ಷಕ ಸಂಘಟನೆಯೊಂದರಿಂದ ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲು ಅವಕಾಶ ನೀಡಿರುವುದು ಇದು ಶಿಕ್ಷಕರ ದಿನಾಚರಣೆಯೆ ಅಥವಾ ಅವಕಾಶ ಸಿಕ್ಕವರ ದಿನಾಚರಣೆ ಎಂಬ ಅನುಮಾನ ಉಂಟು ಮಾಡಿದೆ ಎಂದು ಬೇಸರವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *