ಶಿಕ್ಷಕರ ದಿನಾಚರಣೆಯಂದೇ “ಶಿಕ್ಷಕರಿಗೆ ಶಿಕ್ಷೆ” ಹುಬ್ಬಳ್ಳಿ ಬಿಇಓ ಅವರಿಗೆ ಚೂರು ಬು… ಇಲ್ವಾ…!!!?
1 min readಹುಬ್ಬಳ್ಳಿ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವತ್ತು ಶಿಕ್ಷಕ ಸಮೂಹಕ್ಕೆ ಗೌರವ ನೀಡಬೇಕಾಗಿರುವುದು ಎಲ್ಲರ ಧರ್ಮ. ಆದರೆ, ಹುಬ್ಬಳ್ಳಿಯ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶ, ಶಿಕ್ಷಕರ ಮೇಲೆ ದಬ್ಬಾಳಿಕೆ ಮಾಡುವುದಕ್ಕಾಗಿ ಹೊರಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆದೇಶ ಪ್ರತಿ ಇಲ್ಲಿದೆ ನೋಡಿ..
ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶವನ್ನ ನೋಡಿದ್ರೇ, ಶಿಕ್ಷಕರಲ್ಲಿ ಅಸಹನೆ ಹೆಚ್ಚಾಗುವಂತಿದೆ. ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಆಗಮಿಸಿ, ಶಿಕ್ಷಕರ ದಿನಾಚರಣೆ ಮಾಡಿ, ಅಲ್ಲಿಂದ ಮಕ್ಕಳಿಗೆ ಬಿಸಿಯೂಟ ನೀಡಿ, ಹತ್ತು ಗಂಟೆಗೆ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಂತೆ. ಇದು ಯಾವೊಬ್ಬ ಶಿಕ್ಷಕರು ಸಾಧ್ಯವಾಗುವುದಿಲ್ಲ. ಸಂಘದ ಹೆಸರಲ್ಲಿ ತಿರುಗುವ ಕೆಲವರಿಗೆ ಮಾತ್ರ ಸಾಧ್ಯ ಎನ್ನಲಾಗುತ್ತಿದೆ.
ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರು ಈ ಆದೇಶದ ಬಗ್ಗೆ ಕರ್ನಾಟಕವಾಯ್ಸ್ ಗೆ ಪ್ರತಿಕ್ರಿಯೆ ನೀಡಿ, “ಈ ಆದೇಶವನ್ನ ಮಾಡುವ ಮುನ್ನ ಚರ್ಚಿಸುವ ಅವಶ್ಯಕತೆಯಿತ್ತು. ತೀರಾ ಆತುರವಾಗಿ ಮಾಡಲಾಗಿದೆ” ಎಂದರು.
ಯಾವ ದಿನದಂದು ಅಕ್ಷರ ಕಲಿಸುವ ಗುರುವಿಗೆ ಗೌರವ ಸಿಗಬೇಕಿತ್ತೋ ಅದೇ ದಿನ ಶಿಕ್ಷೆ ರೂಪದ ಆದೇಶ ಹೊರಡಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ವಿರೋಧಿ ಎನ್ನುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿಯನ್ನು ಪಡೆದು, ಇದಕ್ಕೊಂದು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.