ಸರಕಾರಿ ಶಾಲೆ ಶಿಕ್ಷಕರ ಮಗಳ ಬರ್ತಡೇ ಆಚರಣೆ ಹೇಗಿತ್ತು ಗೊತ್ತಾ…!
1 min readರಾಯಚೂರು: ಕೇವಲ ಮಾತನಾಡುವುದರಲ್ಲೇ ಆದರ್ಶ ಮೆರೆಯುವ ಸಾವಿರಾರೂ ಜನರ ನಡುವೆ, ಇಲ್ಲೋಬ್ಬ ಶಿಕ್ಷಕರು ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ. ತಮಗೆ ಅನ್ನ-ನೀರು ಕೊಡುತ್ತಿರುವ ಸರಕಾರಿ ಶಾಲೆಯ ಪ್ರೀತಿಯನ್ನ ಮಗಳ ಮೂಲಕವೂ ಮರೆದಿದ್ದಾರೆ.
ಹೌದು…ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದಿಗ್ಗನಾಯಕನಭಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಮಗಳ ಹುಟ್ಟುಹಬ್ಬದ ಅಂಗವಾಗಿ ಏಳು ಸಾವಿರ ರೂಪಾಯಿಯನ್ನ ದೇಣಿಗೆ ನೀಡಿದ್ದಾರೆ.
ಶಿಕ್ಷಕ ಸುರೇಶ, ತಮ್ಮ ಮಗಳ ಹುಟ್ಟು ಹಬ್ಬದ ನೆನಪಿಗಾಗಿ 7000 ರೂಗಳನ್ನು ದೇಣಿಗೆ ನೀಡುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು. ಶಾಲೆಗೆ ಪತ್ನಿ ಮಗಳ ಜೊತೆಗೆ ಆಗಮಿಸಿದ್ದ ಶಿಕ್ಷಕರು, ಶಾಲೆಯ ಅಂದಚಂದ ನೋಡಿ ಖುಷಿ ಪಟ್ಟು ನಮ್ಮ ಭಾಗದಲ್ಲಿಯೇ ಎಲ್ಲಾ ಸೌಲಭ್ಯವನ್ನು ಹೊಂದುತ್ತಿರುವ ಶಾಲೆ ಇದಾಗಿದೆ. ನಮ್ಮದು ಸ್ವಲ್ಪ ಕಾಣಿಕೆ ಇರಲಿ ಎಂದು SDMC ಅಧ್ಯಕ್ಷ, ಮುಖ್ಯಗುರುಗಳಿಗೆ ಚೆಕ್ ನೀಡಿದರು.
ಸರಕಾರಿ ಶಾಲೆಯ ಶಿಕ್ಷಕ ಸುರೇಶ ಅವರ ಶಿಕ್ಷಣ ಪ್ರೇಮ ಎಲ್ಲರಿಗೂ ಮೆಚ್ಚುವಂತಾಗಿದೆ. ತಮ್ಮ ಮಕ್ಕಳ ಖುಷಿಯನ್ನ ಸರಕಾರಿ ಶಾಲೆಯಲ್ಲಿ ಕಾಣುವ ಇವರ ಬಯಕೆಗೊಂದು ಹ್ಯಾಟ್ಸಾಫ್..