15 ಶಿಕ್ಷಕರಿಗೆ ಸಾವಿತ್ರಿಭಾಯಿ ಫುಲೆ ಪ್ರಶಸ್ತಿ- ನಾಡಿದ್ದು ಪ್ರಶಸ್ತಿ ಪ್ರಧಾನ
1 min readಬೆಳಗಾವಿ: ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಹಾಗೂ ಅಕ್ಷರ ತಾಯಿ ಸೇರಿದಂತೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಜನೇವರಿ 10 ರಂದು ಬೆಳಿಗ್ಗೆ 10.30 ಕ್ಕೆ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ವರದಿಗಾರ ದಿಲೀಪ ಕುರಂದವಾಡೆ ಉದ್ಘಾಟಿಸುವರು. ಪೋಲಿಸ್ ಉಪ ನಿರೀಕ್ಷಕಿ ಸಿಐಡಿ ಅರಣ್ಯ ಸಂಚಾರಿ ದಳದ ರೋಹಿಣಿ ಪಾಟೀಲ, ಕುಂದಗೋಳದ ಸಮಾಜ ಸೇವಕ ರಮೇಶ ಕೊಪ್ಪದ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಶೀಲಾ ಗುರವ ಮುಖ್ಯ ಅತಿಥಿಗಳಾಗಿರುವರು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಪ್ರಭಾವತಿ ಹಾಲಣ್ಣವರ ಅಧ್ಯಕ್ಷತೆ ವಹಿಸುವರು.
ಶಿಕ್ಷಕಿಯರಾದ ಎಂ.ಸುಧಾ, ಜಯಶ್ರೀ ಕಡಕೋಳ, ಸುಮಾ ದೊಡಮನಿ, ವಂದನಾ ಗಾವಡೆ, ಗೀತಾ ಜಮಖಂಡಿ, ಸುರೇಖಾ ಮಿರ್ಜೆ, ಸುವರ್ಣಾ ದಶವಂತ, ಕಿರಣ ಗಾಯಕವಾಡ, ಲೀಲಾವತಿ ದೊಡಮನಿ, ಶಿವಬಾಯವ್ವ ಮಠದ, ಪ್ರೇಮಾ ಜಡಗಿ, ಅನ್ನಪೂರ್ಣ ವಜ್ರಮಟ್ಟಿ, ನೂತನ ಕಾಗಲ, ಎಂ.ಐ. ಬೇಪಾರಿ ಮತ್ತು ಎಸ್.ಕೆ.ಕವಿಶೆಟ್ಟಿ ಅವರುಗಳಿಗೆ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಅಂತಾರಾಜ್ಯ ಪ್ರಶಸಿ ಪ್ರದಾನ ಮಾಡಲಾಗುವದು.
ಡಾ.ಅನ್ನಪೂರ್ಣ ಕಾರಿ ಮತ್ತು ಲೀಲಾ ಪಾಟೀಲ ಅವರುಗಳಿಗೆ ನಾರಿಕುಲ ಚೇತನ ಸಾವಿತ್ರಿಬಾ¬ಫುಲೆ ಅಂತಾರಾಜ್ಯ ಪ್ರಶಸ್ತಿ, ಗೀತಾ ಬಸವರಾಜ ಕೋಲ್ಕಾರ ದಂಪತಿಗಳಿಗೆ ಸಾವಿತ್ರಿಬಾಯಿ ಜ್ಯೋತಿಬಾ ಫುಲೆ, ಆದರ್ಶ ದಂಪತಿಗಳು ಅಂತಾರಾಜ್ಯ ಪ್ರಶಸ್ತಿ, ಡಾ. ಮಲ್ಲಪ್ಪ ಬಾಗೇವಾಡಿ ಅವರಿಗೆ ಜ್ಯೋತಿಭಾ ಫುಲೆ ಜೀವಮಾನದ ಸಾಧನಾ ಅಂತಾರಾಜ್ಯ ಪ್ರಶಸ್ತಿ, ಮಹಾದೇವ ತೋಟಗಿ, ಧರೆಪ್ಪ ಠಕ್ಕಣ್ಣವರ ಮತ್ತು ರಮೇಶ ಕೊಪ್ಪದ ಅವರುಗಳಿಗೆ ಜ್ಯೋತಿಭಾ ಫುಲೆ ಸಮಾಜ ಸೇವಾ ಅಂತಾರಾಜ್ಯ ಪ್ರಶಸಿ ಪ್ರದಾನ ಮಾಡಲಾಗುವದು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾಹಿತಿ ನೀಡಿದ್ದಾರೆ.