Posts Slider

Karnataka Voice

Latest Kannada News

ವಲಯ ವರ್ಗಾವಣೆಗೆ ಇತಿಶ್ರೀ ಹಾಡಿದ ಶಿಕ್ಷಣ ಇಲಾಖೆ: ಶಿಕ್ಷಣ ಸಚಿವರೇ ನೀವೂ ನಗರ ಶಿಕ್ಷಕರಿಗೆ ಸಿಮೀತವಾಗಿ ಕೆಲಸ ಮಾಡಬೇಡಿ..!

1 min read
Spread the love

ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಎಂಬುದು ಗಜಪ್ರಸವದಂತಾಗಿದ್ದು ಅರ್ಥೈಸಿಕೊಂಡ ಹಾಗೆ ನಿಯಮಗಳು ಎನ್ನುವಂತಾಗಿದೆ. ಕಳೆದ ಐದು ವರ್ಷಗಳಲ್ಲಿ ಎರಡು ಬಾರಿ ಮಾತ್ರ ವರ್ಗಾವಣೆ ನಡೆದಿರುತ್ತದೆ.

ಶಿಕ್ಷಣ ಸಚಿವರು ಅಧಿನಿಯಮದ ದೋಷಗಳನ್ನು ಸರಿಪಡಿಸಲು ಶಿಕ್ಷಕರ ವರ್ಗಾವಣೆ ಕಾಯ್ದೆ 2020 ಅನ್ನು ವಿಧಾನಸೌಧದಲ್ಲಿ ಮಂಡಿಸಿ ಅನುಮೋದನೆ ಪಡೆದಿರುತ್ತಾರೆ ಮತ್ತು ಅಧಿಕೃತವಾಗಿ ಕಾಯ್ದೆ ರೂಪದಲ್ಲಿ ಜಾರಿ ಬಂದಿದೆ. ಅದರ ಪ್ರಕಾರ ಹೆಚ್ಚುವರಿ ವರ್ಗಾವಣೆ, ನಿರ್ದಿಷ್ಟ ಹುದ್ದೆಗಳ ಶಿಕ್ಷಕರಿಗೆ ಕೌನ್ಸಲಿಂಗ್, ಕಡ್ಡಾಯ ವರ್ಗಾವಣೆ ಮತ್ತು ಕೋರಿಕೆ ವರ್ಗಾವಣೆಗಳು ನಡೆಯ ಬೇಕಾಗಿತ್ತು. ಆದರೆ ಕೋವಿಡ್ 19ಸಂಕಷ್ಟ ಸಂದರ್ಭದಲ್ಲಿ ಹೆಚ್ಚುವರಿ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಆದರೆ ವಲಯ ವರ್ಗಾವಣೆಯನ್ನು ನಡೆಸಬಹುದಾಗಿತ್ತು. ಯಾಕೆಂದರೆ ವಲಯ ವರ್ಗಾವಣೆ ಎ ವಲಯದಲ್ಲಿನ ಹೆಚ್ಚು ಸೇವೆ ಸಲ್ಲಿಸಿದವರ ವರ್ಗಾವಣೆಯಾಗಿದೆ. ಇದೇ ನೆಪದಲ್ಲಿ ಅದನ್ನು ಕೈಬಿಡಲಾಗಿದೆ ಅಂದರೆ ನಗರ ಅಥವಾ ಎ ವಲಯದವರ ಲಾಬಿ ಯಶಸ್ವಿಯಾಗಿದೆ.

ಹೆಚ್ಚುವರಿ ಇಲ್ಲ ವಲಯ ವರ್ಗಾವಣೆ ಇಲ್ಲ ಆದರೆ ಕಳೆದ ಸಾಲಿನಲ್ಲಿ  ಹೆಚ್ಚುವರಿ/ ಕಡ್ಡಾಯ ವರ್ಗಾವಣೆಯಾದ ಶಿಕ್ಷಕರಿಗೆ ವರ್ಗಾವಣೆ ಅಧಿನಿಯಮದಲ್ಲಿ ಆದ್ಯತೆಯನ್ನು ನೀಡಲು ಸೂಚಿಸಿದ್ದರೂ ಕೂಡಾ ವರ್ಗಾವಣೆ ಪ್ರಕ್ರಿಯೆಗೆ ಮೊದಲೇ ಅವರಿಗೆ ಕೌನ್ಸಲಿಂಗ್ ಮಾಡುತ್ತಿದ್ದು ಕಳೆದ ವರ್ಷ ಕಡ್ಡಾಯ ವರ್ಗಾವಣೆ ಮಾಡಿದ್ದು ಯಾವ ಪುರುಷಾರ್ಥಕ್ಕೆ ಅಂತಾ ಗೊತ್ತಾಗಿಲ್ಲ ಒಂದು ವರ್ಷದೊಳಗೆ ಪುನಃ ಅವರನ್ನು ಎ ವಲಯಕ್ಕೆ ಮರಳಿ ತರೋದಾದರೆ ವಲಯ ವರ್ಗಾವಣೆಯಾದರೂ ಯಾಕೆ ಅಂತಾ..?

ಶಿಕ್ಷಣ ಸಚಿವರು ನಗರ ವಲಯದ ಶಾಸಕರಾಗಿದ್ದು ನಗರ ಪ್ರದೇಶದ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಿರುವದು ಸ್ಪಷ್ಟವಾಗಿ ಕಾಣುತ್ತಿದೆ. ಅವರು ಇಡೀ ರಾಜ್ಯದ ಎಲ್ಲ ಗ್ರಾಮಗಳ ಶಿಕ್ಷಕರ ಮಂತ್ರಿಯಾಗಿಯೂ ಚಿಂತಿಸಬೇಕು ಆದರೆ ವಿಪರ್ಯಾಸವೆಂದರೆ ಕಳೆದ ಸಾಲಿನಲ್ಲಿ ಅನ್ಯಾಯವಾದವರಿಗೆ ಈ ಬಾರಿ ಮೊದಲಿಗೆನೆ ಕೌನ್ಸಲಿಂಗ್ ಆದರೆ ನಿರ್ದಿಷ್ಟ ಹುದ್ದೆಗಳ ಸಿಆರಪಿ ಬಿಆರಪಿಗಳು ಶಿಕ್ಷಣ ಸಂಯೋಜಕರು ಈಗಿರುವ ತಾಲೂಕು ಬಿಟ್ಟು ಹೋಗಬೇಕು ಇದು ಯಾವ ನ್ಯಾಯ, ಇದು ಅವರಿಗೆ ನೇರವಾಗಿ ಇಲಾಖೆಯು ಮಾಡುತ್ತಿರುವ ಅನ್ಯಾಯವಲ್ಲವೇ,? ಇದನ್ನು ಸರಿಪಡಿಸುವಂತೆ ವಿಧಾನಪರಿಷತ್ ಸದಸ್ಯರಾದ ಶ್ರೀ ಸಂಕನೂರ ,ಶ್ರೀ ಪುಟ್ಟಣ್ಣ ರವರು ,ಶ್ರೀ ಗೋ.ಮದಸೂದನ್ ರವರು ಈಗಾಗಲೇ ಸರಕಾರಕ್ಕೆ ಪತ್ರ ಬರೆದಿದ್ದು ಆದರೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ , ಈ ಅನ್ಯಾಯಕ್ಕೆ ಹೊಣೆ ಯಾರು..?

ಅಲ್ಲದೇ ವಲಯ ವರ್ಗಾವಣೆಯಲ್ಲಿ  ತಾಲೂಕಿನೊಳಗೆ ಕೌನ್ಸಲಿಂಗ್ ಮಾಡಲು ಅವಕಾಶ ಮಾಡಿದ್ದು ವಲಯ ವರ್ಗಾವಣೆಯ ಮಹತ್ವವೇ ಕಳೆದುಕೊಂಡಿದೆ ಯಾಕೆಂದರೆ ಬೆಂಗಳೂರು ,ಮೈಸೂರು, ಬೆಳಗಾವಿ,ಗುಲ್ಬರ್ಗಾ ಹುಬ್ಬಳ್ಳಿ ಧಾರವಾಡ ಇತರೆ ಹಲವು ತಾಲೂಕುಗಳು ಪೂರ್ತಿ ಎ ವಲಯದಲ್ಲಿದ್ದು  ಆವಾಗ ವಲಯ ವರ್ಗಾವಣೆ ಹೇಗೆ..?

ಜನನಾಯಕರೇ  ದಯವಿಟ್ಟು ತಾವುಗಳು ಈ ಕುರಿತು ಸರ್ಕಾರದ ಹಾಗೂ ಇಲಾಖೆಯ ಗಮನ ಸೆಳೆದು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ನಗರದಲ್ಲಿ ಸತತ ಹತ್ತು ವರ್ಷಗಳಿಗಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ವರ್ಗಾವಣೆ ಮಾಡುವ ಕಾಯ್ದೆಯನ್ನು ಮುಂದುವರೆಸಲು ಸೂಚಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ (ರಿ) ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಕೋರಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed