ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅಮಾನತ್ತು…
1 min readವಿಜಯಪುರ: ಅಆಇಈ ಕಲಿಸಬೇಕಾದ ಗುರುವೊಬ್ಬರು ಮಾಡಬಾರದ್ದನ್ನ ಮಾಡಿ, ಸಿಕ್ಕಿ ಹಾಕಿಕೊಂಡು ಇದೀಗ ನೌಕರಿಯಿಂದ ಅಮಾನತ್ತಾಗಬೇಕಾದ ಪ್ರಸಂಗ ಬಂದಿದೆ.
ಸಸ್ಪೆಂಡ್ ಆಗಲು ಕಾರಣವಾದ ವೀಡಿಯೋ ಇಲ್ಲಿದೆ ನೋಡಿ..
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬುಯ್ಯಾರ್ ಎಚ್.ಪಿ.ಎಸ್. ಪ್ರಾಥಮಿಕ ಶಾಲೆಯ ಶಿಕ್ಷಕ ಸಿದ್ದರಾಮ ಈಸು ರಾಠೋಡರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಶಿಕ್ಷಕ ಮಹಾಶಯ ಕುಡಿದು ಬಂದು ಬಿಇಓ ಕಚೇರಿಯ ಮುಂಭಾಗದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದ. ಇದನ್ನ ಸ್ಥಳೀಯರೊಬ್ಬರು ವೀಡಿಯೋ ಮಾಡಿದ್ದರು.
ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಕರನ್ನ ಕರ್ನಾಟಕ ನಾಗರಿಕ ಸೇವಾ ನಿಯಮ 1957 ನಿಯಮ 10\1 ಡ ರ ಮೇರೆಗೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.