“ಅಂಬೇಡ್ಕರ್ ಪೋಟೋ ಇಡಂಗಿಲ್ಲ್” ಅಂದಿದ್ದ ಸಹ ಶಿಕ್ಷಕಿಯೂ ಅಮಾನತ್ತು: ಮೊನ್ನೆಯಷ್ಟೇ ಮುಖ್ಯ ಶಿಕ್ಷಕ ಸಸ್ಪೆಂಡ್
1 min readವಿಜಯಪುರ: ಸ್ವಾತಂತ್ರತ್ಯೋತ್ಸವದ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರವನ್ನ ಇಡೋದಕ್ಕೆ ಸರಕಾರದ ಆದೇಶವಿಲ್ಲ. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೂ ಮಾಡಿಲ್ಲವೆಂದು ಹೇಳಿದ್ದ ಮುಖ್ಯ ಶಿಕ್ಷಕರಿಗೆ ಸಾಥ್ ನೀಡಿದ್ದ ಸಹ ಶಿಕ್ಷಕಿಯನ್ನೂ ಅಮಾನತ್ತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಸಿಂದಗಿ ತಾಲೂಕಿನ ಮುಖ್ಯಶಿಕ್ಷಕ ಕೆ.ಬಿ.ಎಸ್.ಮಾಡಬಾಳ, ಬಳಿ ಗ್ರಾಮಸ್ಥರು ಹೋಗಿ ಡಾ.ಅಂಬೇಡ್ಕರವರ ಭಾವಚಿತ್ರವನ್ನ ಯಾಕೆಯಿಟ್ಟಿಲ್ಲದೆಂದು ಪ್ರಶ್ನಿಸಿದಾಗ ಸಂವಿಧಾನ ಶಿಲ್ಪಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮುಖ್ಯಶಿಕ್ಷಕರು ಮಾತನಾಡಿದ ವೀಡಿಯೋ ವೈರಲ್ ಆಗಿದ್ದೇ ತಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ತರಸಿಕೊಂಡ ಡಿಡಿಪಿಐ ಮುಖ್ಯಶಿಕ್ಷಕರನ್ನ ಅಮಾನತ್ತು ಮಾಡಿದ್ದರು. ಇದೇ ಪ್ರಕರಣದಲ್ಲಿ ತಮ್ಮದು ಒಂದಿರಲಿ ಎಂದು ಮಾತಾಡಿದ್ದ ಸಹಶಿಕ್ಷಕಿ ಪಿ.ಎ.ಯಲಗೊಂಡರನ್ನ ಅಮಾನತ್ತು ಮಾಡಲಾಗಿದೆ.
ಸಮಾಜದ ಏಳಿಗೆಗೆ ಸತತ ಜೀವನವನ್ನ ಸವೆಸಿದ ಮಹಾನ್ ವ್ಯಕ್ತಿಯ ಬಗ್ಗೆ ಶಿಕ್ಷಕ ಮಹಾಶಯರೇ ಇಂತಹ ಮಾತುಗಳನ್ನಾಡಿದ್ದು ಖೇದಕರ ಸಂಗತಿಯಾಗಿದೆ. ಇದಕ್ಕೆ ಸಹಕಾರ ನೀಡಿದ ಶಿಕ್ಷಕಿಗೂ ಅಧಿಕಾರಿಗಳು ಅಮಾನತ್ತಿನ ಮೂಲಕ ಚಾಟಿಯೇಟು ನೀಡಿದ್ದಾರೆ.