Posts Slider

Karnataka Voice

Latest Kannada News

ಮೂರು ಲಕ್ಷಕ್ಕಾಗಿ ಶಿಕ್ಷಕ ಆತ್ಮಹತ್ಯೆ…!

Spread the love

ಬಾಗಲಕೋಟೆ: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರೌಢಶಾಲಾ ಶಿಕ್ಷಕರೊಬ್ಬರು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ಸಂಭವಿಸಿದೆ.

SUICIDE HANAMATH PUJAR

ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೂಗುನೂರು ಗ್ರಾಮದ ಹನಮಂತ ಪೂಜಾರ ಎಂಬುವವರೇ ನೇಣಿಗೆ ಶರಣಾದ ಶಿಕ್ಷಕರಾಗಿದ್ದಾರೆ.

ಮೃತ ಶಿಕ್ಷಕ ಹನಮಂತ ಪೂಜಾರ, ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟು, ‘ನನ್ನ ಸಾವಿಗೆ ಕಮತಗಿ ಪಟ್ಟಣದ ತಿಮ್ಮಣ್ಣ ಹಗೇದಾಳ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ಎಷ್ಟೊಂದು ಕೇಳಿದರೂ ಕೊಟ್ಟಿಲ್ಲ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲ, ತಿಮ್ಮಣ್ಣ ಹಗೇದಾಳ ಅವರ ಮೊಬೈಲ್ ನಂಬರ ಕೂಡಾ ನಮೂದು ಮಾಡಿದ್ದಾರೆ.

TIMMANNA HAGEDAL

ಕಮತಗಿ ಪಟ್ಟಣದಲ್ಲಿ ಶಿಕ್ಷಕ ಹನಮಂತ ಅವರು, ನಿವೇಶನ ಖರೀದಿಸಲು ತಿಮ್ಮಣ್ಣ ಎಂಬಾತರಿಗೆ ಮೂರು ಲಕ್ಷ ಮುಂಗಡ ನೀಡಿದ್ದರು. 13 ಲಕ್ಷಕ್ಕೆ ನಿವೇಶನ ಖರೀದಿಗೆ ಒಪ್ಪಂದವಾಗಿತ್ತು. 3 ಲಕ್ಷ ಕೊಟ್ಟ ಮೇಲೆ ಇನ್ನುಳಿದ ಹಣವನ್ನ ಹೊಂದಿಸಲು ಶಿಕ್ಷಕನಿಗೆ ಆಗಿರಲಿಲ್ಲ. ಇದೇ ಕಾರಣಕ್ಕೆ ಕೊಟ್ಟ ಹಣವನ್ನ ಮರಳಿ ಕೊಡುವಂತೆ ಶಿಕ್ಷಕರು ಕೇಳಿದ್ದರೂ, ತಿಮ್ಮಣ್ಣ ಹಣವನ್ನ ಕೊಡದೇ ಸತಾಯಿಸುತ್ತಿದ್ದ.

ಮೃತ ಶಿಕ್ಷಕ ಹನಮಂತ ಪೂಜಾರ, ಪತ್ನಿ, ಇಬ್ಬರು ಗಂಡು, ಒಂದು ಹೆಣ್ಣು ಮಗಳು, ತಾಯಿ, ಸಹೋದರ, ಸಹೋದರಿಯರನ್ನ ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದ ಹಾಗೇ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *