ಗ್ರಾ.ಪಂ ಚುನಾವಣೆ: ಶಿಕ್ಷಕರಿಗೆ ವಿಶೇಷ ಆಧ್ಯತೆಗೆ ಗ್ರಾಮೀಣ ಸಂಘ ಮನವಿ

ಬಳ್ಳಾರಿ: ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಶಿಕ್ಷಕರಿಗೆ ಕೆಲವು ವಿಶೇಷ ಆಧ್ಯತೆಯನ್ನ ನೀಡುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊರೋನಾ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಆಧ್ಯತೆಗಳನ್ನ ನೀಡುವಂತೆ ಶಿಕ್ಷಕರು ಮನವಿ ಮಾಡಿಕೊಂಡಿದ್ದು, ಅವುಗಳ ಜೊತೆಗೆ ಮನವಿಯೂ ಇಲ್ಲಿದೆ ನೋಡಿ..
# 50ವರ್ಷ ಮೇಲ್ಪಟ್ಟ ಹಿರಿಯ ಶಿಕ್ಷಕರಿಗೆ
# ಮಧುಮೇಹ, ಶ್ವಾಸಕೋಶ ಸಂಬಂಧಿ, ತೀವ್ರತರದ ಕಾಯಿಲೆಯಿರುವ ಶಿಕ್ಷಕರು
# ಗರ್ಭಿಣಿ ಶಿಕ್ಷಕಿಯರು ಹಾಗೂ ಹಾಲುಣಿಸುವ ತಾಯಂದಿರು
# ವಿಕಲಚೇತನ ಶಿಕ್ಷಕರು
ಈ ಥರದ ಶಿಕ್ಷಕರನ್ನ ಚುನಾವಣೆಗೆ ನೇಮಕ ಮಾಡಬಾರದೆಂದು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಂದೀಶ್ ಪುಂಡಿ, ಪ್ರಧಾನ ಕಾರ್ಯದರ್ಶಿ ಕೋಟೇಶ್, ಉಪಾಧ್ಯಕ್ಷ ಎ. ಬಸವಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ರಾಘವೇಂದ್ರ ವಾಸುದೇವ್, ಎನ್ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ G Y ತಿಪ್ಪಾರೆಡ್ಡಿ, ತಾಲ್ಲೂಕು ಅಧ್ಯಕ್ಷ ರಮೇಶ್ ಎನ್, ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಮಂಜುನಾಥ್ ನಾಟೇಕರ್, ಗ್ರಾಮೀಣ ಶಿಕ್ಷಕರ ಸಂಘದ ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಗೌಡಪ್ಪ ಬಿಎಚ್, ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆಂಚಪ್ಪ ಕೆ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀದೇವಿ, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ದೊಡ್ಡಬಸಪ್ಪ ಕುರುಗೋಡು, ತಾಲ್ಲೂಕು ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.