ಕೊರೋನಾದಿಂದ ಶಿಕ್ಷಕ-ಶಿಕ್ಷಕಿ ಸಾವು: ನೆಮ್ಮದಿ ಕಳೆದುಕೊಂಡ ಸರಸ್ವತಿ ಪುತ್ರರು
1 min readಹಾಸನ: ಕೊರೋನಾ ಹಾವಳಿಯಿಂದ ನಿರಂತರವಾಗಿ ಶಿಕ್ಷಕ ವಲಯದಲ್ಲಿಯೂ ಸಾವುಗಳು ಸಂಭವಿಸುತ್ತಿರುವುದು ಶಿಕ್ಷಣ ಇಲಾಖೆಯಲ್ಲಿ ತೀವ್ರ ಆತಂಕವನ್ನ ಮೂಡಿಸಿದ್ದು, ಪ್ರತಿದಿನವೂ ನೆಮ್ಮದಿಯಿಲ್ಲದ ಜೀವನ ನಡೆಸುವಂತಾಗಿದೆ. ಇದಕ್ಕೆ ಕಾರಣವಾಗಿದ್ದು ಶಿಕ್ಷಕರ ಸಾಲು ಸಾಲು ಸಾವುಗಳು.
ಜಿಲ್ಲೆಯ ಅರಸಿಕೇರಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಹಾಗೂ ನೌಕರರ ಸಂಘದ ಉಪಾಧ್ಯಕ್ಷ ನಿರಂಜನಮೂರ್ತಿ ಕೊರೋನಾ ಪಾಸಿಟಿವ್ ನಿಂದ ನಿಧನರಾಗಿದ್ದಾರೆ.
ಹಾಸನ ತಾಲೂಕಿನ ಕುದುರಗುಂಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸ್ವರ್ಣಲತಾ ಕೂಡಾ ಕೊರೋನಾ ಪಾಸಿಟಿವ್ ನಿಂದ ತೀರಿಕೊಂಡಿದ್ದಾರೆ. ನೋವಿನ ಸಂಗತಿಯಂದರೇ ಸ್ವರ್ಣಲತಾರ ಪತಿ ಹಿಂದಿನ ದಿನವಷ್ಟೇ ಮೃತರಾಗಿದ್ದರು.
ನಿರಂಜನಮೂರ್ತಿ, ಶಿಕ್ಷಕರ ಯಾವುದೇ ಸಮಸ್ಯೆಯಿದ್ದರೂ ತಕ್ಷಣವೇ ಬಂದು ನಿಲ್ಲುತ್ತಿದ್ದರು. ಇವರ ಸಾವಿನಿಂದ ಶಿಕ್ಷಕ ವಲಯ ನೋವಿನಿಂದ ಬೇಸರಗೊಂಡಿದೆ.
ಕೆಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯಿಂದ ಹಲವೆಡೆ ಸಂಚರಿಸುತ್ತಿರುವುದು ಶಿಕ್ಷಕರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಹೀಗಾಗಿಯೇ ಕೊರೋನಾ ಸೋಂಕು ಕೂಡಾ ತಗುಲಿ, ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.