ಶಿಕ್ಷಕರ ವಿಶ್ವಾಸಾರ್ಹತೆ ಜಗತ್ತಿನಲ್ಲೇ ಭಾರತಕ್ಕೆ 6ನೇ ಸ್ಥಾನ
ನವದೆಹಲಿ: ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋಭವ ಎನ್ನುವ ಉಪದೇಶ ಎಲ್ಲ ಕಾಲಕ್ಕೂ ನಿರಂತರವಾಗಿರತ್ತೆ ಎನ್ನುವುದಕ್ಕೆ ಈ ಕಾಲದಲ್ಲೂ ಸಾಕ್ಷಿಯೊಂದು ದೊರಕಿದ್ದು, ಜಗತ್ತಿನಲ್ಲಿ ಶಿಕ್ಷಕರ ವಿಶ್ವಾಸಾರ್ಹತೆ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಭಾರತಕ್ಕೆ 6ನೇ ಸ್ಥಾನ ದೊರಕಿದೆ.
ಲಂಡನ್ ಮೂಲದ ಸಂಸ್ಥೆಯೊಂದು ಈ ಸಮೀಕ್ಷೆಯನ್ನ ನಡೆಸಿದ್ದು, 35 ದೇಶಗಳಲ್ಲಿ ಈ ಸಮೀಕ್ಷೆಯನ್ನ ನಡೆಸಲಾಗಿತ್ತು. ಇದರಲ್ಲಿ ಭಾರತಕ್ಕೆ 6 ನೇ ಸ್ಥಾನ ಲಭಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಜನರಿಗೆ ಶಿಕ್ಷಕರ ಬಗ್ಗೆ ಥಟ್ ಅಂತಾ ಹೇಳಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಜನ ಹೆಚ್ಚು ಯೋಚಿಸದೇ ಮತ್ತು ಹೆಚ್ಚು ಸಮಯವನ್ನ ತೆಗೆದುಕೊಳ್ಳದೆ ತಮ್ಮ ಅಭಿಪ್ರಾಯವನ್ನ ಹೊರ ಹಾಕಿದ್ದರು.
35 ದೇಶಗಳ ಸಮೀಕ್ಷೆಯಲ್ಲಿ ಚೀನಾ, ಘಾನಾ, ಸಿಂಗಾಪುರ, ಕೆನಡಾ ಮತ್ತು ಮಲೇಷ್ಯಾದ ನಂತರದ ಸ್ಥಾನವನ್ನ ಭಾರತ ಅಲಂಕರಿಸಿದೆ. ಶಿಕ್ಷಕರ ಬಗ್ಗೆ ದೇಶದಲ್ಲಿರುವ ಗೌರವ ಅಭಿಮಾನ ಈ ಮೂಲಕ ಹೊರಬಂದಿದೆ.
ಭಾರತದ ಸಂಸ್ಕೃತಿಯಲ್ಲಿ ಗುರುವಿಗೆ ಮೊದಲ ಸ್ಥಾನವೇ ಇದೆ. ಯಾವಾಗಲೂ ಶಿಕ್ಷಕರನ್ನ ಸಾಮಾನ್ಯ ಜನ ಕೂಡಾ, ಗೌರವದಿಂದಲೇ ಕಾಣುತ್ತಾ ಬಂದಿದ್ದಾರೆ. ಶಿಕ್ಷಕರಿಗೆ ಸಿಗುತ್ತಿರುವ ಈ ಗೌರವ ನಿರಂತರವಾಗಿ ಮುಂದುವರೆಯಲಿ.