ಹುಬ್ಬಳ್ಳಿಯಲ್ಲಿ ಸರಕಾರಿ ಶಾಲೆ ಶಿಕ್ಷಕಿ ಹಾರ್ಟ್ ಅಟ್ಯಾಕಿನಿಂದ ಸಾವು…!

ಹುಬ್ಬಳ್ಳಿ: ಸರಕಾರಿ ಶಾಲೆಯ ಶಿಕ್ಷಕಿಯೋರ್ವರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿಯ ಮಂಟೂರ ರಸ್ತೆಯ ನಿವಾಸವೊಂದರಲ್ಲಿ ನಡೆದಿದೆ.

ಕಸಬಾಪೇಟೆಯ ಸರಕಾರಿ ಉರ್ದು ಶಾಲೆಯ ಶಿಕ್ಷಕಿ ರಜೀಯಾ ದಾವಲಬಾಯಿ ಎನ್ನುವ ಶಿಕ್ಷಕಿಯೇ ಸಾವಿಗೀಡಾಗಿದ್ದು, ಇವರು ಹುಬ್ಬಳ್ಳಿಯ ಮಂಟೂರ ರಸ್ತೆಯ ಪ್ರದೇಶದಲ್ಲಿ ವಾಸವಾಗಿದ್ದರು.
ಶಾಲೆಗಳು ರಜೆ ಕೊಟ್ಟ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ರಿಜಲ್ಟ್ ಸೀಟ್ ಸಿದ್ಧ ಮಾಡುವ ಸಮಯದಲ್ಲಿಯೇ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಶಿಕ್ಷಕಿ ಸಾವಿಗೀಡಾಗಿದ್ದಾರೆ.
ಕೊರೋನಾ ಸಮಯದಲ್ಲಿಯೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ರಜೀಯಾ, ವಿದ್ಯಾರ್ಥಿಗಳಿಗೆ ಮೆಚ್ಚಿನ ಶಿಕ್ಷಕಿಯಾಗಿದ್ದರು. ಇವರ ಸಾವಿನ ಸುದ್ದಿ ಶಿಕ್ಷಕ ವಲಯದಲ್ಲಿ ಆಘಾತ ಮೂಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶಿಕ್ಷಕ ವಲಯ ಪ್ರಾರ್ಥಿಸಿದೆ.