ನಲಿಕಲಿ ಶಿಕ್ಷಕಿ ಕೊರೋನಾಗೆ ಬಲಿ: ತಬ್ಬಲಿಯಾದ ಎರಡು ಮಕ್ಕಳು

ಬೆಂಗಳೂರು: ಕೊರೋನಾ ವೈರಸ್ ಶಿಕ್ಷಕ ಸಮೂಹವನ್ನ ಪ್ರತಿದಿನವೂ ತಲ್ಲಣಗೊಳಿಸುತ್ತಿದ್ದು, ದಿನವೂ ಆತಂಕ ದಿನ ಕಳೆಯುತ್ತಿದ್ದಾಗಲೇ ಒಂದಿಲ್ಲಾ ಒಂದು ಪ್ರದೇಶದಲ್ಲಿ ಶಿಕ್ಷಕರ ಸಾವುಗಳು ಸಂಭವಿಸುತ್ತಿರುವುದು ಮತ್ತಷ್ಟು ಆತಂಕ್ಕೀಡು ಮಾಡುತ್ತಿದೆ.
ಬೆಂಗಳೂರು ದಕ್ಷಿಣ ವಲಯ ನಂಬರ 1ರಲ್ಲಿ ಬರುವ ದೊಡ್ಡಕಲ್ಲಸಂದ್ರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಚಂದ್ರಕಲಾ ಕೊರೋನಾ ಪಾಸಿಟಿವ್ ನಿಂದ ಇಂದು ಸಾವಿಗೀಡಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ದೊಡ್ಡಕಲ್ಲಸಂದ್ರ ಶಾಲೆಯಲ್ಲಿಯೇ ಶಿಕ್ಷಕಿಯಾಗಿರುವ ಚಂದ್ರಕಲಾ ಎಂ, ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಿನ್ನೀಗ ಅಗಲಿದ್ದಾರೆ.
ಮೂಲತಃ ರಾಮನಗರದವರಾಗಿದ್ದ ಶಿಕ್ಷಕಿ ಚಂದ್ರಕಲಾ ನಲಿಕಲಿ ಶಿಕ್ಷಕಿಯಾಗಿದ್ದರು. ಬೆಂಗಳೂರು ಶ್ರೀನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಶಾಲೆಗೆ ಬಾರದೇ ಇರುವುದರಿಂದ ಇವರನ್ನ ಕೊರೋನಾ ಸೇವೆಗೆ ನಿಯೋಜನೆ ಮಾಡಿದ್ದರು. ಇಂದು ಮಧ್ಯಾಹ್ನ 12.30ಕ್ಕೆ ಚಂದ್ರಕಲಾ ಎಂ, ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.