ಸರಕಾರಿ ಶಾಲೆ ಶಿಕ್ಷಕ ‘ಹೃದಯಾಘಾತದಿಂದ’ ಸಾವು..!

ಧಾರವಾಡ: ನಗರದ ರವಿವಾರಪೇಟೆಯ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಸಹಶಿಕ್ಷಕರೋರ್ವರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದ್ದು, ಪತ್ನಿ ಹಾಗೂ ನಾಲ್ಕು ಮಕ್ಕಳನ್ನ ಅಗಲಿದ್ದಾರೆ.

ಧಾರವಾಡದ ಮಣಿಕಂಠನಗರದ ಏಳನೇ ಕ್ರಾಸ್ ನಿವಾಸಿಯಾಗಿದ್ದ ಮುಸ್ತಫಾ ಗುಡಿಹಾಳ ಎಂಬುವವರೇ ನಿಧನರಾಗಿದ್ದು, ಪತ್ನಿಯು ಕೂಡಾ ಶಿಕ್ಷಕರಾಗಿದ್ದು, ಇಬ್ಬರು ಹೆಣ್ಣು ಹಾಗೂ ಎರಡು ಗಂಡು ಮಕ್ಕಳನ್ನ ಅಗಲಿದ್ದಾರೆ.
ಮುಸ್ತಫಾ ಗುಡಿಹಾಳ ಅವರು ಅತೀವ ಶಿಕ್ಷಣದ ಪ್ರೀತಿಯನ್ನ ಹೊಂದಿದ್ದರು. ಇವರ ಹಿರಿಯ ಸಹೋದರ ಕೂಡಾ ಶಿಕ್ಷಕರಾಗಿಯೇ ನಿವೃತ್ತಿ ಹೊಂದಿದ್ದಾರೆ. ಮುಸ್ತಫಾ ಅವರ ಸಾವಿನಿಂದ, ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಶಿಕ್ಷಕ ವಲಯವೂ ತೀವ್ರ ಆಘಾತ ಅನುಭವಿಸಿದೆ.
ಮೃತರ ಅಂತ್ಯಕ್ರಿಯೆ ಧಾರವಾಡದಲ್ಲಿ ನಡೆಯುತ್ತಿದ್ದು, ಮುಸ್ತಫಾ ಗುಡಿಹಾಳ ಅವರ ನಿಧನಕ್ಕೆ ಶಿಕ್ಷಕ ಸಂಘಟನೆಗಳು ಸಂತಾಪ ಸೂಚಿಸಿವೆ.