ಸರಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಕೊರೋನಾಗೆ ಬಲಿ: ಅಯ್ಯೋ.. ದೇವರೇ..!

ಹಾವೇರಿ: ಕ್ರಿಯಾಶೀಲ ಶಿಕ್ಷಕ ಹಾಗೂ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದ ಸರಕಾರಿ ಶಾಲೆಯ ಶಿಕ್ಷಕರೋರ್ವರು ಕೊರೋನಾ ಪಾಸಿಟಿವ್ ನಿಂದ ಬಳಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಲತಃ ದೇವಿಹೊಸೂರಿನ ಸೋಮಶೇಖರ ಹೊಸಳ್ಳಿ ಎಂಬ ಶಿಕ್ಷಕರೇ ಕೊರೋನಾ ಪಾಸಿಟಿವ್ ಗೆ ಬಲಿಯಾಗಿದ್ದಾರೆ. ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದ, ಇವರ ವಯಸ್ಸು ಕೇವಲ 42.
ಕಳೆದ ಆರು ವರ್ಷದಿಂದ ಕಳ್ಳಿಹಾಳ ಗ್ರಾಮದಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಶಿಕ್ಷಕ ಸೋಮಶೇಖರ, ವಿಜ್ಞಾನ ಪಾಠವೆಂದರೇ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಎನ್ನುವಂತೆ ಮಾಡುವಲ್ಲಿ ಸಫಲತೆ ಕಂಡಿದ್ದರು.
ಮೃತ ಶಿಕ್ಷಕ ಸೋಮಶೇಖರ ಹೊಸಳ್ಳಿಯವರ ಮಡದಿ ಸಹಾಯಕ ಗುಮಾಸ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, 12 ವರ್ಷದ ಮಗುವನ್ನ ಅಗಲಿದ್ದಾರೆ.
ಶಿಕ್ಷಕರಲ್ಲಿಯೇ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹಲವೆಡೆ ಸಾವುಗಳು ಸಂಭವಿಸುತ್ತಿವೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಶಿಕ್ಷಕ ಸಮೂಹಕ್ಕೆ ಈ ಸಾವು ಮತ್ತಷ್ಟು ಬೇಸರವನ್ನ ಮೂಡಿಸಿದೆ. ಸೋಮಶೇಖರ ಹೊಸಳ್ಳಿಯವರ ಆತ್ಮಕ್ಕೆ ಶಾಂತಿ ಕೋರಿರುವ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ, ಹೊಸಳ್ಳಿಯವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.