“ನಲಿಕಲಿ”ಯ ಹೊನ್ನಪ್ಪನವರ ಇನ್ನಿಲ್ಲ: ಕಲಿಸುವ ಗುರುಗಳನ್ನೂ ಬಿಡದ ಕೊರೋನಾ
ಹಾವೇರಿ: ನಲಿಕಲಿ ಶಿಕ್ಷಕರಾಗಿದ್ದರೂ ಕೋವಿಡ್ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಶಿಕ್ಷಕ ಕೊರೋನಾಗೆ ಬಲಿಯಾದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಖರ್ಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ.ಜಿ.ಹೊನ್ನಪ್ಪನವರ ಕೊರೋನಾದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಶಿಕ್ಷಕ ಸಾವನ್ನಪ್ಪಿದ್ದಾರೆ.
ಕ್ರಿಯಾಶೀಲರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಶಿಕ್ಷಕ ಹೊನ್ನಪ್ಪನವರ, ಕೆಲವು ದಿನಗಳಿಂದ ಶಿಗ್ಗಾಂವಿ ದೇಸಾಯಿ ಗಲ್ಲಿಯ ಕೋವಿಡ್-19 ಚೆಎಕ್ ಪೋಸ್ಟನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಶಿಕ್ಷಕ ಹೊನ್ನಪ್ಪನವರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ರಾಜ್ಯ ಘಟಕ , ಹುಬ್ಬಳ್ಳಿಯಿಂದ ಅಶೋಕ ಸಜ್ಜನ ಸಂತಾಪ ಸೂಚಿಸಿದ್ದಾರೆ.