ಕೊರೋನಾಗೆ ಮತ್ತೋಬ್ಬ ಶಿಕ್ಷಕಿ ಬಲಿ: ಹೆಚ್ಚಾಗುತ್ತಿರುವ ಶಿಕ್ಷಕರ ಸಾವು ಪ್ರಕರಣ
ಬಳ್ಳಾರಿ: ಜಿಲ್ಲೆಯ ಬೆಳಗಲು ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಶಿಕ್ಷಣ ಇಲಾಖೆಯಲ್ಲಿ ಉತ್ತಮ ಶಿಕ್ಷಕರೆನಿಸಿಕೊಂಡಿದ್ದ ಶಿಕ್ಷಕಿ ಫರೀದಾ ಪರ್ವೀನ್ ಸಾವಗೀಡಾಗಿದ್ದು, ಇಲಾಖೆಯಲ್ಲಿ ಸೋಂಕಿನಿಂದ ತೀರಿಕೊಂಡಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ಪಾಲಕರಿಗೆ ಮಾಹಿತಿ ಕೊಡುವಾಗಲೂ ಸೋಂಕು ತಗುಲುವ ವಾತಾವರಣ ಸೃಷ್ಟಿಯಾಗಿದ್ದು, ಶಿಕ್ಷಕರಿಗೆ ಮಾರಕವಾಗಿದೆ. ಶಿಕ್ಷಕಿಯ ಸಾವು ಶಿಕ್ಷಕ ವಲಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ವಿವಿಧ ಶಿಕ್ಷಕ ಸಂಘಟನೆಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇತ್ತೀಚೆಗೆ ವಿವಿಧ ಪ್ರದೇಶದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಶಿಕ್ಷಕರು ಕೋವಿಡ್-19ಗೆ ಬಲಿಯಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.