ಕೊರೋನಾಗೆ ಮತ್ತೋರ್ವ ಶಿಕ್ಷಕ ಬಲಿ: ತಲ್ಲಣಗೊಂಡ ಶಿಕ್ಷಕ ಸಮೂಹ
1 min readಕಲಬುರಗಿ: ಆರೋಗ್ಯವಾಗಿದ್ದ ಸಣ್ಣ ವಯಸ್ಸಿನ ಶಿಕ್ಷಕರೋರ್ವರು ಕಳೆದ ಒಂದು ತಿಂಗಳಿಂದ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ(ರೋಜಾ ಪೈನ್ ಬಾಯ್ಸ್)ಯಲ್ಲಿ ಶಿಕ್ಷಕರಾಗಿದ್ದ 42 ವಯಸ್ಸಿನ ಶರಣಬಸಪ್ಪ ಜೋಗದ ಕೊರೋನಾ ಪಾಸಿಟಿವನಿಂದ ಸಾವಿಗೀಡಾಗಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬೈರಾಮಡಗಿ ಗ್ರಾಮದ ಶರಣಬಸಪ್ಪ ಜೋಗದ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರ್ಗಿ ಉತ್ತರ ವಲಯದ ಅಧ್ಯಕ್ಷರಾಗಿಯೂ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಹಕಾರ ಸಂಘದ ಕಲಬುರಗಿ ಜಿಲ್ಲಾ ಘಟಕದ ನಿರ್ದೇಶಕರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಮೃತ ಶಿಕ್ಷಕ ಶರಣಬಸಪ್ಪ ಜೋಗದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬದ ಸದಸ್ಯರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ಕಲಬುರ್ಗಿ ಉತ್ತರ ವಲಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಲಬುರ್ಗಿ ಉತ್ತರ ವಲಯ ಕಾರ್ಯಾಲಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲಿಸಲಾಯಿತು.
ಕಲಬುರ್ಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಅಶೋಕ ಸೊನ್ನ, ಶರಣಬಸಪ್ಪ ಎಂ.ಪೊಲೀಸಪಾಟೀಲ, ನಾಗನಾಥ ಕಾಶೆಟ್ಟಿ, ಕಛೇರಿಯ ಸಿಬ್ಬಂದಿಗಳು, BRC, ECO, CRP ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದರು