ಶಿಕ್ಷಕಿಗೆ 2ಲಕ್ಷ 40ಸಾವಿರ ಟೋಪಿ: ಅತೀ ಆಸೆ ಗತಿಗೇಡು: ಪಾಠ ಮರೆತ ಟೀಚರ..
ಗದಗ: ಶಾಲೆಯಲ್ಲಿ ಮಕ್ಕಳಿಗೆ ನೂರಾರೂ ಬಾರಿ ಹೇಳಿದ್ದ ‘ಅತೀ ಆಸೆ ಗತಿಗೇಡು’ ಎಂಬ ನಾಣ್ಣುಡಿಯನ್ನ ಶಿಕ್ಷಕಿಯೋರ್ವರು ಮರೆತು ನಡೆದುಕೊಂಡ ಪರಿಣಾಮ ಬರೋಬ್ಬರಿ 2ಲಕ್ಷ 39 ಸಾವಿರದಾ 500 ರೂಪಾಯಿಯನ್ನ ಕಳೆದುಕೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿ ನರೇಗಲ್ ಪಟ್ಟಣದಲ್ಲಿ ನಡೆದಿದೆ. ಅದೇಗೆ ಹಣ ಕಳೆದುಕೊಂಡ್ರು ಗೊತ್ತಾಗಬೇಕಾದ್ರೇ, ಇದನ್ನ ಪೂರ್ತಿ ಓದಿ..
ನರೇಗಲ್ ಪಟ್ಟಣದ ಹಿರೇಮಠ ಓಣಿ ನಿವಾಸಿಯಾಗಿರುವ ಶಿಕ್ಷಕಿ ಪ್ರಭಾವತಿ ವೀರಪ್ಪ ಜುಟ್ಲದ ಎಂಬುವವರಿಗೆ ಕಾರಿನ ಆಸೆ ತೋರಿಸಿ ಮೋಸ ಮಾಡಲಾಗಿದೆ. ಆಗಿದ್ದೇನೆಂದರೇ, ನಿಮಗೊಂದು ಐಷಾರಾಮಿ ಕಾರು ಬಹುಮಾನವಾಗಿ ಬಂದಿದೆ ಎಂದು ಪ್ರಮುಖ ಕಂಪನಿಯೊಂದರ ಹೆಸರಿನ ಮೂಲಕ ಇವರಿಗೆ ಕಾಲ್ ಮಾಡಿದ್ದಾರೆ.
ಕಾರಿನ ಆಸೆಗೆ ಬಿದ್ದ ಶಿಕ್ಷಕಿ ಅವರು ಹೇಳಿ ಅಕೌಂಟಿಗೆ ದುಡ್ಡು ಹಾಕುತ್ತಲೇ ಹೋಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗುವವರೆಗೂ ಇವರು ಹಣವನ್ನ ಹಾಕುವುದು ಬಿಟ್ಟೆಯಿಲ್ಲ. ಇದೀಗ ಶಿಕ್ಷಕಿ ಹೋದ ಹಣಕ್ಕಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ಬಃ ಮರಳುವ ಭರವಸೆಯೊಂದಿಗೆ ಮನೆಯಲ್ಲಿದ್ದಾರಂತೆ.
ಶಿಕ್ಷಕಿಯಾದವರೇ ಹೀಗೆ ‘ಅತೀ ಆಸೆ ಗತಿ ಗೇಡು’ ಮರೆತು ಇದ್ದರೇ ಹೇಗೆ ಅಲ್ವೇ..