ಸರಕಾರಿ ಶಾಲಾ ಶಿಕ್ಷಕ ಅರೆಸ್ಟ್: ಗೃಹ ಸಚಿವರ ಸಂಬಂಧಿಯೆಂದು ಸೋಗು..
1 min readಚಿಕ್ಕಬಳ್ಳಾಪುರ: ಗೃಹ ಸಚಿವರ ಸಂಬಂಧಿಯಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದ ಶಿಕ್ಷಕನ ಅಸಲಿತ್ತು ಹೊರಬಿದ್ದ ನಂತರ ಬಂಧನವಾಗಿ ಜೈಲು ಪಾಲಾದ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ತರಿದಾಳು ಸರಕಾರಿ ಶಾಲೆಯ ಶಿಕ್ಷಕ ರವಿಪ್ರಕಾಶನೇ ಬಂಧಿತನಾಗಿ ಜೈಲು ಪಾಲಾಗಿದ್ದಾನೆ. ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸೈಗೆ ಬೇರೆಯವರಿಂದ ಕಾಲ್ ಮಾಡಿಸಿ, ತಾನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂಬಂಧಿಯಂದು ಹೇಳಿಕೊಂಡಿದ್ದ. ತಮ್ಮ ವ್ಯಯಕ್ತಿಕ ಕೆಲಸವನ್ನ ಮಾಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಹೋದವರಿಗೆ ಪೊಲೀಸರು ತಮ್ಮ ಕೈಚಳಕ ತೋರಿಸಿದ್ದಾರೆ.
ಶಿಕ್ಷಕ ರವಿಪ್ರಕಾಶಗೆ ಸಾಥ್ ನೀಡಿದ್ದ ಬಸವರಾಜು ಎಂಬಾತನ ಮೇಲೂ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಜೈಲಿಗೆ ಹಾಕಲಾಗಿದೆ. ಶಿಕ್ಷಕರೆನಿಸಿಕೊಂಡವರಲ್ಲಿ ಇಂತವರು ಇರಬಹುದು ಎಂದು ತೋರಿಸಿಕೊಟ್ಟ ರವಿಪ್ರಕಾಶನಿಗೆ ಪೊಲೀಸರು ಹಿಗ್ಗಾ-ಮುಗ್ಗಾ ತರಗತಿ ತೆಗೆದುಕೊಂಡಿದ್ದಾರೆಂದು ಗೊತ್ತಾಗಿದೆ.