Posts Slider

Karnataka Voice

Latest Kannada News

ವಠಾರ ಶಾಲೆಯ ವಿರುದ್ಧ ಶಿಕ್ಷಕರ ತಕರಾರು- ಶಿಕ್ಷಕರು ಮನುಷ್ಯರಲ್ಲವೇ..? ಸರಕಾರ ಉತ್ತರಿಸಿ

1 min read
Spread the love

ಧಾರವಾಡ: ರಾಜ್ಯ ಸರಕಾರ ಕೊರೋನಾ ಹಿನ್ನೆಲೆಯಲ್ಲಿ ಹೊಸದೊಂದು ಆಯಾಮಕ್ಕೆ ಮುಂದಾಗುತ್ತಿದ್ದು, ವಠಾರ ಶಾಲೆಯಂಬ ಹೊಸ ಕಲ್ಪನೆಯನ್ನ ಮಾಡುವಂತೆ ಶಿಕ್ಷಕರಿಗೆ ತಿಳಿಸುತ್ತಿದೆ. ಆದರೆ, ಈ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದು, ಇದಕ್ಕೆ ಸರಕಾರವೇ ಉತ್ತರಿಸಬೇಕಿದೆ.

ಈ ಬಗ್ಗೆ ಸರಕಾರಕ್ಕೆ ಶಿಕ್ಷಕರು ಮನವಿ ಮಾಡಿಕೊಂಡಿದ್ದು… ಮನವಿ ಇಂತಿದೆ…

ಸನ್ಮಾನ್ಯ ಶ್ರಿ ಎಸ್.ಆರ್.ಉಮಾಶಂಕರ್ ರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬೆಂಗಳೂರ. 01

ವಿಷಯ: ವಿದ್ಯಾಗಮ ಸರಳೀಕೃತ ಪರಿಷ್ಕೃತ ಒತ್ತಡ ರಹಿತ ಮಾರ್ಗಸೂಚಿ ಹೊರಡಿಸಲು ಮನವಿ..

ಮಾನ್ಯರೆ..

ರಾಜ್ಯದಲ್ಲಿ ಶಿಕ್ಷಕರಿಗೆ ವಠಾರ ಶಾಲೆ ಹಾಗೂ ವಿದ್ಯಾಗಮ ಕಾರ್ಯ ನಿರ್ವಹಣೆ ಹಾಗೂ ಶಿಕ್ಷಕರಿಗೆ ಐದು ದಿನಗಳ ತರಬೇತಿ ಕುರಿತು ಅನುಷ್ಠಾನಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಸಹ ಶಿಕ್ಷಕರ ಮೇಲೆ ಮೌಖಿಕವಾಗಿ ಅತೀವ ಒತ್ತಡ ಹಾಕುತ್ತಿರುವುದು ನಮ್ಮ ಸಂಘಕ್ಕೆ ಸಹಸ್ರ ಸಹಸ್ರ ಮನವಿಗಳು ಬಂದಿರುತ್ತವೆ. ಆದರೆ ಈ ಕುರಿತು ವಿದ್ಯಾಗಮ ಬೋಧನೆ ಹಾಗೂ ಕಲಿಕೆಗೆ ಪೂರಕವಾಗಿ ದೂರದರ್ಶನ, ವಾಟ್ಸಾಫ್, ವೆಬಿನಾರ್ ಆನ್ ಲೈನ್, ದೂರವಾಣಿ, ಧ್ವನಿ ಮುದ್ರಿಕೆ, ಚಿತ್ರಸುರುಳಿ, ಆನ್‌ಲೈನ್ ಚಿತ್ರ ಕಲಿಕೆ, ಸಂಭಾಷಣೆ, ಪಠ್ಯ ಪುಸ್ತಕ ಮೂಲಕ ಪರೋಕ್ಷ ಕಲಿಕೆ ಹೀಗೆ ಹಲವಾರು ಕಲಿಕಾ ಪ್ರಕ್ರಿಯೆಗಳನ್ನು ನಾವೆಲ್ಲ ನಡೆಸುತ್ತಿದ್ದೇವೆ. ಹಾಗೂ ಮುಂದೆಯೂ ನಡೆಸುತ್ತೇವೆ ಹೀಗಿರುವಂತೆ ವಠಾರ ಶಾಲೆ ಗುಂಪು ಕಲಿಕೆ ನಡೆಸಲು ಒತ್ತಡ ಹಾಕುತ್ತಿರುವುದು ಎಷ್ಟು ಸಮಂಜಸವಾಗಿರುತ್ತದೆ ? ಭದ್ರತೆ ಇಲ್ಲದಿರುವುದು ಹಾಗೂ ಮಳೆಗಾಲದ ವಾತಾವರಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭೌತಿಕವಾಗಿ ಪೂರಕ ವಾತಾವರಣ ಇರುವುದಿಲ್ಲ. ಗುಂಪು ಕಲಿಕೆಯಲ್ಲಿ ಸಾಮಾಜಿಕ ಅಂತರ ಕಷ್ಟಕರವಾಗುತ್ತದೆ. ಕರ್ನಾಟಕದಲ್ಲಿ ತೀವ್ರವಾಗಿ ಕೊರೋನಾ ಪ್ರಸರಿಸುತ್ತಿದ್ದು ಈ ಪರಿಸ್ಥಿಯಲ್ಲಿ ಹೊರಾಂಗಣ ಕಲಿಕೆ ಗುಂಪು ಕಲಿಕೆ ಶಿಕ್ಷಕರಿಗೆ ತರಬೇತಿ. ನಾಡಿನ ಕೋಮಲ ಕುಸುಮಗಳಾದ ಮಕ್ಕಳನ್ನು ಹಾಗೂ ದೇಶದ ಹೀರೋಗಳಾಗಿರುವ ಶಿಕ್ಷಕರನ್ನು ಕೊರೋನಾಕ್ಕೆ ತಳ್ಳಿದಂತಾಗಬಾರದು ಯಾವ ಚಟುವಟಿಕೆಗಳಾದರು ಮಾಡುತ್ತೇವೆ. ಆದ್ರೆ ವಠಾರ ಶಾಲೆಗಳು ಸಧ್ಯಕ್ಕೆ ಬೇಡವೇ ಬೇಡ. ಮಕ್ಕಳಿಗೆ ತಂತ್ರಜ್ಞಾನದ ಬೋಧನೆ ಮಾಡಲು ಸಿದ್ಧರಿದ್ದೇವೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಒತ್ತಡ ರಹಿತ ಸರಳೀಕೃತ ಪರಿಷ್ಕೃತ ಕಾರ್ಯಭಾರದ ಮಾರ್ಗಸೂಚಿ ಸುತ್ತೋಲೆ ನೀಡಲು ನಮ್ಮ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ರಾಜ್ಯ ಘಟಕ, ಹುಬ್ಬಳ್ಳಿ ಇದರ ರಾಜ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ, ಗೌರವ ಸಲಹೆಗಾರ ನಾಡೋಜ ಮಹೇಶ ಜೋಶಿ, ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಉಪಾಧ್ಯಕ್ಷ ಎಂ.ಐ.ಮುನವಳ್ಳಿ, ಗೋವಿಂದ ಜುಜಾರೆ, ಶ್ರೀಕಾಂತ ರೋಣದ, ನಾಗರಾಜು.ಕೆ, ಆನಂದ ದುಂದೂರ ನಾಡಿನ ಸಮಸ್ತ ಗುರುಬಳಗದ ವತಿಯಿಂದ ಈ ಮೂಲಕ ತಮ್ಮಲ್ಲಿ ಸವಿನಯದೊಂದಿಗೆ ಪ್ರಾರ್ಥಿಸಿಕೊಳ್ಳುತ್ತ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

*ಗೌರವಾನ್ವಿತ ವಂದನೆಗಳೊಂದಿಗೆ*
*ತಮ್ಮ ವಿಧೇಯರು*


Spread the love

Leave a Reply

Your email address will not be published. Required fields are marked *