ತಾಕತ್ತ್ ಇದ್ದರೆ ಉಚ್ಛಾಟನೆ ಮಾಡಿ.. ನೀವೂ ಒಂದು….!

ಧಾರವಾಡ: ಶಿಕ್ಷಕರ ನೋವಿಗೆ ಸ್ಪಂಧನೆ ಮಾಡದಿರುವ ಸರಕಾರದ ಧೋರಣೆಯನ್ನ ಖಂಡಿಸಿ ಶಿಕ್ಷಕ ಸಂಘದ ನೇತಾರರು, ತರಾಟೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ಸಮಗ್ರವಾಗಿ ಪ್ರಕಟಣೆಯನ್ನ ಹೊರಡಿಸಿದ್ದಾರೆ.
ಪ್ರಕಟಣೆ ಇಂತಿದೆ.
ಎಲ್ಲದಕ್ಕೂ ಜೈ ಎನ್ನಲು ಬೇಕು ಮಾನ್ಯತೆ
ನಮಗೆ ಮಾರಕವಾಗಿದ್ದನ್ನು ವಿರೋಧಿಸಲು ಬೇಕು ಎದೆಗಾರಿಕೆ
ಆತ್ಮೀಯ ಶಿಕ್ಷಕ ಬಂಧುಗಳೆ ಕಳೆದ ಕೆಲವು ದಿನಗಳಿಂದ ಈ ರಾಜ್ಯದ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಕರ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಕೆಲವರು ತಮ್ಮನ್ನು ಬಿಟ್ಟು ಬೇರೆ ಯಾವ ಸಂಘಟನೆಗಳನ್ನು ಇಲಾಖೆಯ ಕಾರ್ಯಕ್ರಮಗಳಿಗೆ ಅವ್ಹಾನಿಸಬಾರದು ಬೇರೆ ಯಾವ ಸಂಘಟನೆಗಳ ಕಾರ್ಯಕ್ರಮಗಳಿಗೂ ಅನ್ಯ ಕಾರ್ಯನಿಮಿತ್ತ ರಜೆ ನೀಡಬಾರದು ಎಂದು ಇಲಾಖೆಯ ಅಧಿಕಾರಿಗಳಿಂದ ಆದೇಶ ಮಾಡಿಸುವ ಮೂಲಕ ತಾವು ಸರ್ಕಾರದ ಪರವಾಗಿ ನಿಲ್ಲುವ ಸಂಘಟನೆ ಎಂದು ಮತ್ತೊಮ್ಮೆ ನಿರೂಪಿಸಲು ಹೊರಟಿದ್ದಾರೆ.

ನೊಂದಾಯಿತ ನೊಂದ ಶಿಕ್ಷಕರ ಪರವಾಗಿ ಹೋರಾಟ ಮಾಡುವ ಶಿಕ್ಷಕರ ಸಂಘಟನೆಗಳನ್ನು ವಿರೋಧಿಸುವ ಇವರಿಗೆ ನಿಜವಾದ ತಾಕತ್ತು ಇದ್ದರೆ ನೋಂದಾಯಿತ ಶಿಕ್ಷಕರ ಸಂಘದ ಸದಸ್ಯತ್ವ ಪಡೆದ ಪ್ರತಿಯೊಬ್ಬ ಶಿಕ್ಷಕರನ್ನು ಅವರ ಸಂಘದ ಬೈಲಾ ನಿಯಮಾವಳಿ 4 ಎ ರಿಂದ 4 ಎಲ್ ಪ್ರಕಾರ ಉಚ್ಚಾಟನೆ ಮಾಡಲಿ ಒಂದು ವೇಳೆ ಹೀಗೆ ಮಾಡಿದರೆ ರಾಜ್ಯದಿಂದ ಇವರ ಸಂಘಟನೆ ಉಚ್ಚಾಟನೆ ಆಗುತ್ತದೆ ಕೈಲಾಗದವರು ಮೈಯೆಲ್ಲಾ ಪರಿಚಿಕೊಂಡಂತೆ ಹಳೆಯ ಆದೇಶಗಳನ್ನು ತೋರಿಸಿ ಅಧಿಕಾರಿಗಳಿಂದ ಈ ರೀತಿ ಹೊಸ ಆದೇಶಗಳನ್ನು ಮಾಡಿಸುತ್ತಿದ್ದಾರೆ
ನಾವು ಹೋರಾಟಗಾರರು ನೋವನ್ನು ಉಂಡವರು ನಮ್ಮ ಹೊಟ್ಟೆ ನೋವಿಗೆ ನಾವೇ ಅಜವಾನ ಸೇವಿಸಬೇಕು ಎಂದು ಸಂಘಟನೆ ಕಟ್ಟಿದವರು ಯಾರು ಬಂಧನದಲ್ಲಿ ಇಲ್ಲದವರು, ಹಂಗಿನಲ್ಲಿ ಇರದವರು ನಮ್ಮ ದೃಢ ಸಂಕಲ್ಪ ಒಂದೆ ಸರ್ಕಾರಕ್ಕೆ ಶರಣಾಗಿ ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ಲಕ್ಷಾಂತರ ಶಿಕ್ಷಕರ ಬಡ್ತಿ, ಸಂಧ್ಯಾ ಕಾಲದ ಸುರಕ್ಷತೆ, ಕೇಂದ್ರ ಮಾದರಿ ವೇತನ, ಮುಂತಾದ ಸೌಲಭ್ಯಗಳನ್ನು ಕಿತ್ತು ಕೊಂಡವರ ವಿರುದ್ಧ ಹೋರಾಡುವುದು ನಮಗೆ ಆದ ಅನ್ಯಾಯಕ್ಕಾಗಿ ನಿರಂತರವಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಹಾಗೂ ಸಕಾಲಿಕವಾಗಿದೆ ಈ ಹಿನ್ನೆಲೆಯಲ್ಲಿ ನೋಂದಾಯಿತ ಎಲ್ಲ ಸಂಘಟನೆಗಳು ಸಿಡಿದೇಳಬೇಕಾಗಿದೆ ಎಂದು ರಾಜ್ಯ ಶಿಕ್ಷಕ ನೇತಾರರಾದ ಅಶೋಕ ಎಮ್.ಸಜ್ಜನ ಹಾಗೂ ಮಲ್ಲಿಕಾರ್ಜುನ.ಸಿ. ಉಪ್ಪಿನ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.