ಆಸ್ತಿ ತೆರಿಗೆ ರಿಯಾಯತಿ ಕಾಲಾವಧಿ ಜೂನ್ ವರೆಗೆ ಮುಂದೂಡಿದ ಸರಕಾರ…!
1 min readಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಮತ್ತು ಸ್ಥಳೀಐ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೆ ದಿನಾಂಕವನ್ನೂ ಮುಂದೂಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹತ್ವದ ಆದೇಶವನ್ನ ಹೊರಡಿಸಿದ್ದು, ಜೂನ್ 30ರ ವರೆಗೆ ಆಸ್ತಿ ತೆರಿಗೆ ತುಂಬಲು ಅವಕಾಶವನ್ನ ನೀಡಿದೆ.
2020-21ರ ಆಸ್ತಿ ತೆರಿಗೆಯನ್ನ ಏಪ್ರಿಲ್ ನಲ್ಲಿ ತುಂಬಿದವರಿಗೆ ಶೇಕಡಾ 5ರಷ್ಟು ರಿಯಾಯತಿಯನ್ನ ಕೊಡುವುದಾಗಿ ಹೇಳಲಾಗಿತ್ತು. ಈಗ ರಿಯಾಯತಿಯನ್ನ ಮುಂದುವರೆಸುವ ಜೊತೆಗೆ, ತೆರಿಗೆ ತುಂಬುವ ದಿನಾಂಕವನ್ನ ಮುಂದೂಡಲಾಗಿದೆ.
ಈ ಕುರಿತಂತೆ ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ನ ರಜತ ಉಳ್ಳಾಗಡ್ಡಿಮಠ ಸೇರಿದಂತೆ ಹಲವರು ರಾಜ್ಯ ಸರಕಾರಕ್ಕೆ, ಜನರ ಸಮಸ್ಯೆಯನ್ನ ತಿಳಿಸಿ, ಕರ ತುಂಬುವುದನ್ನ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.