ತಾರಿಹಾಳ ಬೆಂಕಿ ಅವಘಡ: ಶರಣಾದ ಮಾಲೀಕನನ್ನ “ಅರೆಸ್ಟ್” ಮಾಡಿದಂತೆ ತೋರಿಸಿದ ಇನ್ಸಪೆಕ್ಟರ್ ರಮೇಶ ಗೋಕಾಕ…!!!!
1 min readಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ಪ್ಯಾಕ್ಟರಿ ನಡೆಸುತ್ತಿದ್ದ ಪಾರ್ಟನರ್ ಗಳ ಪೈಕಿ ಓರ್ವನು ಇಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ಜುಲೈ 23 ರಂದು ಸ್ಪಾರ್ಕಲ್ ಪ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಇಲ್ಲಿಯವರೆಗೆ ಐವರು ಸಾವಿಗೀಡಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದರಾದರೂ, ಮಾಲೀಕರು ಸಿಕ್ಕಿರಲಿಲ್ಲ. ಇದೀಗ ಓರ್ವ ಪಾರ್ಟನರ್ ಅಬ್ದುಲ ಖಾದರ ಶೇಖ ಉರ್ಫ್ ಶಿರಹಟ್ಟಿ ಎಂಬಾತ ಪೊಲೀಸರಿಗೆ ಶರಣಾಗಿದ್ದಾರೆ.
ಈ ಪ್ಯಾಕ್ಟರಿಯಲ್ಲಿ ಯುವತಿಯೋರ್ವಳು ಮಾಲೀಕರಿದ್ದು, ಆಕೆಯೂ ಕೂಡಾ ಪೊಲೀಸರಿಗೆ ಶರಣಾಗಲಿದ್ದಾಳೆಂದು ಹೇಳಲಾಗುತ್ತಿದೆ. ಘಟನೆ ನಡೆದು ಸುಮಾರು ಎಂಟು ದಿನಗಳವರೆಗೆ ಪೊಲೀಸರ ಕೈಗೆ ಮಾಲೀಕ ಸಿಗದೇ ಇರಲು ನಿಜವಾದ ಕಾರಣವನ್ನ ಪೊಲೀಸರೇ ನೀಡಬೇಕಿದೆ.