ಹುಬ್ಬಳ್ಳಿಯಲ್ಲಿ ಅಪಘಾತ-ಮಹಿಳೆಯ ದುರ್ಮರಣ

ಹುಬ್ಬಳ್ಳಿ: ಟ್ಯಾಂಕರ್ ವೇಗವಾಗಿ ಬಂದು ಜೂಪಿಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಜೆ.ಜಿ.ಕಾಲೇಜಿನ ಹತ್ತಿರ ಸಂಭವಿಸಿದೆ.
ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ರವಿ ಶಿವಪ್ಪ ಚಾಕಲಬ್ಬಿ ಚಲಾಯಿಸುತ್ತಿದ್ದ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ಚಿಚಕ್ರವಾಹನದ ಹಿಂದುಗಡೆ ಕುಳಿತ ರತ್ನವ್ವ ಚೆನ್ನಬಸಯ್ಯ ಹಿರೇಮಠ ಎಂಬ ಮಹಿಳೆಗೆ ತೀವ್ರವಾದ ಗಾಯಗಳಾಗಿತ್ತು.
ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಸಮಯದಲ್ಲೇ ಕಿಮ್ಸ್ ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪಿದ್ದಾರೆ. ಪ್ರಕರಣವನ್ನ ದಾಖಲು ಮಾಡಿರುವ ಉತ್ತರ ಸಂಚಾರಿ ಠಾಣೆ ಪೊಲೀಸರು, ತನಿಖೆಯನ್ನ ಕೈಗೊಂಡಿದ್ದಾರೆ.
ಟ್ಯಾಂಕರ್ ಸಂಖ್ಯೆ ಕೆಎ-27 ಬಿ-2584 ವಾಹನವನ್ನ ವಶಕ್ಕೆ ಪಡೆದಿದ್ದಾರೆ.