“ತಮಾಟಗಾರ ಆಡೀಯೋ ವೈರಲ್” ಹಿಂದಿದೇಯಾ ಶಾಸಕ ಪ್ರಸಾದ ಅಬ್ಬಯ್ಯ ‘ಕೈ’ವಾಡ…!?
1 min readಧಾರವಾಡ: ಕಾಂಗ್ರೆಸ್ ಮುಖಂಡ ಹಾಗೂ ಧಾರವಾಡ-71 ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿರುವ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಇಮೇಜ್ ಹಾಳು ಮಾಡಲು ಕೆಲವರು ಕೂಡಿಕೊಂಡು ಆಡೀಯೋ ವೈರಲ್ ಮಾಡಿದ್ದಾರೆಂದು ಹೇಳಲಾಗಿದ್ದು, ಅದಕ್ಕೆ ಪೂರಕವಾದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಆಡೀಯೋದಲ್ಲಿರುವ ಮಾತುಗಳನ್ನ ಸೂಕ್ಷ್ಮವಾಗಿ ಅವಲೋಕಿಸಿ.. ಇದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಏನಂದ್ರು.. ಎಂಬುದು ಇಲ್ಲಿದೆ ನೋಡಿ..
ಅಸಲಿಗೆ ಅಜರ ಮನಿಯಾರ ಎಂಬಾತನೇ ಇಸ್ಮಾಯಿಲ ತಮಾಟಗಾರ ಜೊತೆ ಮಾತಾಡಿದ್ದು. ಈ ಅಜರ ಮನಿಯಾರನ ಸಹೋದರ ನಿಜಾಮ ಮನಿಯಾರ ಹಳೇಹುಬ್ಬಳ್ಳಿ ಗಲಾಟೆಯಲ್ಲಿ ಜೈಲೊಳಗೆ ಪೊಲೀಸರು ಹಾಕಿದ್ದಾರೆ. ಘಟನೆಯ ದಿನ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ, ಇದೇ ನಿಜಾಮನನ್ನ ಕರೆದುಕೊಂಡು ಹೋಗಿದ್ದರು. ಸೋಜಿಗವೆಂದರೇ ಅಲ್ತಾಪ ಹಳ್ಳೂರ ಹೊರಗೆ ಉಳಿದ್ರು, ನಿಜಾಮ ಮನಿಯಾರ ಜೈಲಿಗೆ ಹೋದ.
ಇಷ್ಟದರೂ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಅಲ್ತಾಪ ಹಳ್ಳೂರ ಜೊತೆ ನಿಜಾಮ ಮನಿಯಾರನ ಸಹೋದರ ಅಜರ ಮನಿಯಾರ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇಲ್ಲವೂ ಗೊತ್ತಿದ್ದ ಕಾರಣಕ್ಕೆ ಇಸ್ಮಾಯಿಲ ತಮಾಟಗಾರ ‘ಅವರಿಬ್ಬರ’ ಹೆಸರು ತೆಗೆದುಕೊಂಡು ಮಾತಾಡಿದ್ದಾರೆಂದು ಹೇಳಲಾಗುತ್ತಿದೆ.
ಧಾರವಾಡ- 71 ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಪ್ರಬಲ ಆಕಾಂಕ್ಷಿಯಾಗಿರುವ ಇಸ್ಮಾಯಿಲ ತಮಾಟಗಾರ ವಿರುದ್ಧ ಈ ಆಡೀಯೋ ಹರಿಬಿಡಲಾಗುತ್ತಿದೆ. ಆದರೆ, ಇದರ ಹಿಂದೆ “ರಾಜಕೀಯ” ಡ್ರಾಮಾ ಇದೆ ಎಂದು ಹೇಳಲಾಗುತ್ತಿದೆ.
ಶಾಸಕ ಪ್ರಸಾದ ಅಬ್ಬಯ್ಯ ಅವರು ತಮ್ಮ ಆಪ್ತ ಅಜರ ಮನಿಯಾರ ಮೂಲಕ ಇದನ್ನ ಮಾಡಿಸಿರಬಹುದಾ ಎಂಬ ಪ್ರಶ್ನೆಗೂ ಶಾಸಕರು ಉತ್ತರಿಸಬೇಕಿದೆ.