“ಪ್ರಕಾಶ ನಾಶಿ”ಯವರೇ ಸರಕಾರದ ಕೆಲಸ ದೇವರ ಕೆಲ್ಸಾ ಅಂದ್ರೇ ಇದೇನಾ..?: ನೀವೂ ಹಿಂಗಾ..?
1 min readಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸ ಎಂದುಕೊಂಡು ನಡೆಯುವ ಅಧಿಕಾರಿಗಳು ಅದನ್ನ ಸರಿಯಾಗಿಯೇ ನಿಭಾಯಿಸುತ್ತಾರಾ ಎಂಬ ಪ್ರಶ್ನೆಗಳು ಪದೇ ಪದೇ ಮೂಡುತ್ತಲೇ ಇರುತ್ತವೆ. ಈಗ ಮತ್ತೊಂದು ಸಾಕ್ಷಿಯಾಗಿ ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ ನಾಶಿಯವರ ವಾಹನದ ಸ್ಥಿತಿ.
ತಹಶೀಲ್ದಾರ ಪ್ರಕಾಶ ನಾಶಿಯವರ ವಾಹನದ ನೋಂದಣಿ ಸಂಖ್ಯೆ ಮಾಯವಾಗಿ ಅದೇಷ್ಟು ದಿನಗಳು ಕಳೆದಿವೆಯೋ ಗೊತ್ತಿಲ್ಲ. ಅವರ ವಾಹನದ ಬದಿಯಲ್ಲಿ ನಿಖರವಾದ ಸಂಖ್ಯೆ ಕಾಣಿಸೋದು ಇಲ್ಲ. ಇನ್ನೂ ಇವರ ವಾಹನದ ಹೆಡ್ ಲೈಟ್ ಗಳು ಹಗಲಿನಲ್ಲೂ ಉರಿಯುತ್ತವೆ. ನಮಗೆ ತಿಳಿದಿರುವಂತೆ ಹೆಡ್ ಲೈಟ್ ಗಳನ್ನ ರಾತ್ರಿಯಲ್ಲಿ ಮಾತ್ರ ಹಚ್ಚುವುದು, ಆದ್ರೇ, ಇವರ ವಾಹನ ಹಗಲಿನಲ್ಲೂ ಬೆಳಕು ಹುಡುಕುತ್ತಿದೆ.
ಆಕಸ್ಮಿಕವಾಗಿ ತಾಂತ್ರಿಕ ಸಮಸ್ಯೆಯಿದ್ದರೇ ಅದನ್ನ ರಿಪೇರಿ ಮಾಡಿಸುವ ಜವಾಬ್ದಾರಿಯನ್ನ ಸಂಬಂಧಿಸಿದವರು ಮಾಡಬೇಕಲ್ಲವೇ. ತಹಶೀಲ್ದಾರ ಪ್ರಕಾಶ ನಾಶಿಯವರೇ, ನೀವು ಒಳ್ಳೆಯ ಅಧಿಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಸರಕಾರಿ ವಾಹನಗಳು ಕೂಡಾ ಜನರ ಆಸ್ತಿಯನ್ನುವುದನ್ನ ತಾವು ಮರೆಯಬಾರದಲ್ವೆ. ರೂಲ್ಸ್ ನಿಮಗೂ ಮತ್ತೂ ಜನಸಾಮಾನ್ಯರಿಗೂ ಒಂದೇ ಅಲ್ವೇ..! ಸರಕಾರದ ಕೆಲಸ ದೇವರ ಕೆಲಸ.. ಅಷ್ಟೇ..