ತಹಶೀಲ್ದಾರ ಕಾರು ನಾಪತ್ತೆ: ಮರವೇರಿರುವ ತಹಶೀಲ್ದಾರ
ಕಲಬುರಗಿ: ಜಿಲ್ಲೆಯಾಧ್ಯಂತ ವರುಣನ ಆರ್ಭಟ ಮುಂದುವರಿದ ಪರಿಣಾಮ ಹಳ್ಳದ ಪ್ರವಾಹಕ್ಕೆ ಕೊಚ್ಚಿ ತಹಶೀಲ್ದಾರ್ ಕಾರು ಹೋಗಿದ್ದು, ಕಾರಿನಿಂದ ತಹಶೀಲ್ದಾರ ಹೊರಬಂದು ಮರವೇರಿ ಕುಳಿತಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಣಾಪುರ ಗ್ರಾಮದ ಬಳಿ ನಡೆದಿದೆ.
ತಹಶೀಲ್ದಾರ ಪಂಡಿತ್ ಬಿರಾದಾರರೇ ಪ್ರವಾಹಕ್ಕೆ ಸಿಲುಕಿದ ಅಧಿಕಾರಿಯಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾದಗಿರಿಯಿಂದ ಚಿಂಚೋಳಿ ಮಾರ್ಗವಾಗಿ ಬೀದರ್‌ಗೆ ತೆರಳುತ್ತಿರುವಾಗ ಘಟನೆ ಸಂಭವಿಸಿದೆ.
ತಹಶೀಲ್ದಾರರ ಕಾರು ನೀರಿನಲ್ಲಿ ಕೊಚ್ಚಿ ಹೋಗಿ ತಹಶೀಲ್ದಾರರು ಮರವನ್ನೇರಿ ಕೂತಿರುವ ಪ್ರಕರಣ ಗೊತ್ತಾಗುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ನೀರಿನ ಸೆಳವು ಹೆಚ್ಚಾಗಿ ಇರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದ್ದು, ಬೋಟ್ ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಯೇ ನೀರಿನಲ್ಲಿ ಸಿಕ್ಕಿಕೊಂಡಿದ್ದು, ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.