ನಿವೃತ್ತ ಶಿಕ್ಷಕನಿಂದ ತಹಶೀಲ್ದಾರಗೆ ಚಾಕು ಇರಿತ: ತಹಶೀಲ್ದಾರ ಸಾವು
1 min readಕೋಲಾರ: ಜಮೀನಿನ ಅಳತೆ ಮಾಡಲು ಪೊಲೀಸ್ ನೊಂದಿಗೆ ಬಂದ ತಹಶೀಲ್ದಾರಗೆ ನಿವೃತ್ತ ಶಿಕ್ಷಕರೋರ್ವರು ಚಾಕುವಿನಿಂದ ಎದೆಗೆ ಚುಚ್ಚಿರುವ ಪ್ರಕರಣ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಸಂಭವಿಸಿದೆ.
ರಾಮಮೂರ್ತಿ ಎಂಬುವವರು ತಮ್ಮ ಜಮೀನಿನ ಅಳತೆ ಮಾಡುವಂತೆ ತಹಶೀಲ್ದಾರರಿಗೆ ಅರ್ಜಿ ನೀಡಿದ್ದರು. ಆ ಪ್ರಕಾರ ಇಂದು ತಹಶೀಲ್ದಾರ್ ಚಂದ್ರಮೌಳೇಶ್ವರ, ಕಾಮಸಮುದ್ರ ಪೊಲೀಸ್ ಠಾಣೆಯ ಪೇದೆ ಜೊತೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ಇದೇ ಸಮಯದಲ್ಲಿ ರಾಮಮೂರ್ತಿಯ ಎದುರಾಳಿ ವೆಂಕಟಾಚಲಪತಿ ನಡುವೆ ಜಮೀನು ತ್ಯಾಜ್ಯವಿತ್ತು. ತಹಶೀಲ್ದಾರರು ಬಂದು ವೆಂಕಟಾಲಪತಿಯ ಜಮೀನಿನಲ್ಲಿನ ಕಲ್ಲನ್ನ ತೆಗೆದಿದ್ದರಿಂದ ಕೋಪಗೊಂಡ ನಿವೃತ್ತ ಶಿಕ್ಷಕ ವೆಂಕಟಾಚಲಯ್ಯ ಎದೆ ಭಾಗಕ್ಕೆ ಚೂರಿ ಇರಿದಿದ್ದಾನೆ. ತೀವ್ರ ಗಾಯಗೊಂಡಿರುವ ತಹಶೀಲ್ದಾರರನ್ನ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ತಹಶೀಲ್ದಾರ ಸಾವಿಗೀಡಾಗಿದ್ದಾರೆ. ಆರೋಪಿಯನ್ನ ಕಾಮಸಮುದ್ರ ಠಾಣೆ ಪೋಲಿಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.