ತಡಸ ಕ್ರಾಸ್- ‘ಶ್ರದ್ಧಾ’ದಲ್ಲಿ ಅಕ್ರಮ ಡಿಸೇಲ್ ಸಾಗಾಟ: ನಾಲ್ವರ ಬಂಧನ- ಶುರುವಾಗಿದೆ ದಂಧೆ
1 min readಹಾವೇರಿ: ಪೆಟ್ರೋಲ್ ಬಂಕ್ ಗಳಗೆ ಹೋಗುತ್ತಿದ್ದ ಡಿಸೇಲ್ ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಬಂಧಿಸಿ ಸಾವಿರಾರೂ ಲೀಟರ್ ಡಿಸೇಲ್ ಮತ್ತು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಬಂಕ್ ಗಳಿಗೆ ಹೋಗುವ ಟ್ಯಾಂಕರಗಳಿಂದ ಕದ್ದು ಡಿಸೇಲ್ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ, ಹತ್ತು ಸಾವಿರ ಲೀಟರ್ ಡಿಸೇಲ್ ಮತ್ತು ಅದನ್ನ ಸಾಗಿಸುತ್ತಿದ್ದ ಶ್ರದ್ಧಾ ಹೆಸರಿನ ಲಾರಿಯನ್ನ ವಶಕ್ಕೆ ಪಡೆಯಲಾಗಿದೆ.
ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ತಡಸ ಕ್ರಾಸ್ ಬಳಿ ನಡೆಯುತ್ತಿದ್ದ ಈ ದಂಧೆಯನ್ನ ದಾವಣಗೆರ ಐಜಿಪಿ ಸ್ಕ್ವಾಡ್ ಡಿವೈಎಸ್‌ಪಿ ತಿರುಮಲೇಶ್ ತಂಡ ಬಯಲಿಗೆಳೆದಿದೆ.
ಲಾರಿ ಸೇರಿದಂತೆ 10 ಸಾವಿರ ಲೀಟರ್ ಡಿಸೇಲ್, ಸಾಗಿಸಲು ಬಳಕೆ ಮಾಡುತ್ತಿದ್ದ ಕ್ಯಾನಗಳನ್ನೂ ಸೇರಿದಂತೆ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಐಜಿಪಿ ತಂಡ ಆರೋಪಿಗಳ ಸಮೇತ ತಡಸ ಪೊಲೀಸ್ ಠಾಣೆಗೆ ಹಿಡಿದು ಕೊಟ್ಟಿದ್ದು, ಸ್ಥಳೀಯವಾಗಿ ವಿಚಾರಣೆ ಆರಂಭವಾಗಿದೆ.
ಹಲವು ದಿನಗಳಿಂದಲೂ ಟ್ಯಾಂಕರ್ ಗಳಿಂದ ಕದ್ದು ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು ಎಂದು ಮಾಹಿತಿಯಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮವನ್ನ ತೆಗೆದುಕೊಂಡಿರಲಿಲ್ಲ. ಹೀಗಾಗಿ ಐಜಿಪಿ ತಂಡ ಉತ್ತಮ ಕಾರ್ಯವನ್ನ ಮಾಡಿ ಮುಗಿಸಿದೆ.